ಇ ಸಮಾಚಾರ ಡಿಜಿಟಲ್ ನ್ಯೂಸ್ . (esamacharadigital news) ಜೊಯಿಡಾ(Joida)  : ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ(Goa-Belagavi) ರಾಮನಗರ ಬಳಿ   ಕಾರುಗಳ ನಡುವೆ   ಸಂಭವಿಸಿದ  ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ  ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಾದಿಂದ ಹುಬ್ಬಳ್ಳಿ(Goa to Hubli) ಕಡೆ  ತೆರಳುತ್ತಿದ್ದ ಇನ್ನೋವಾ ಕಾರು(Innova  Car) ಹಾಗೂ ಹುಬ್ಬಳ್ಳಿಯಿಂದ ಗೋವಾದತ್ತ(Hubli to Goa) ಸಾಗುತ್ತಿದ್ದ ರೆನಾಲ್ಟ್ ಕ್ವಿಡ್(Renault Kwid) ಕಾರುಗಳ ನಡುವೆ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ  ರೆನಾಲ್ಟ್ ಕ್ವಿಡ್ ಕಾರಿನಲ್ಲಿದ್ದ  ರುದ್ರಯ್ಯ ಶಿವನವರ (77) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ರೇಣುಕಾ ಹಿರೇಮಠ (60) ಎಂಬುವರನ್ನು ರಾಮನಗರ ಆಸ್ಪತ್ರೆಗೆ(Ramanagar Hospital) ದಾಖಲಿಸಿದ ಬಳಿಕ  ಮೃತಪಟ್ಟಿದ್ದಾರೆ. ಮೃತರು‌ ಹುಬ್ಬಳ್ಳಿ ತಾಲೂಕಿನ ಲಕ್ಷ್ಮೇಶ್ವರ ನಿವಾಸಿಗಳಾಗಿದ್ದು(Lakshmeshwar Native), ಪ್ರಸ್ತುತ ಗೋವಾದ ಫೊಂಡಾದಲ್ಲಿ(Goa Ponda) ವಾಸವಿದ್ದರು ಎಂದು ತಿಳಿದುಬಂದಿದೆ

ಅಪಘಾತದಲ್ಲಿ ಚಾಲಕ ಶಿವರಾಜ ಶಿವನವರ (28) ಹಾಗೂ ಬಸವ ಶಿವನವರ (70) ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ(Ramanagar Government Hospital) ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಆಸ್ಪತ್ರೆಗೆ(Belagavi Hospital) ದಾಖಲಿಸಲಾಗಿದೆ.

ಅಪಘಾತ ಲೋಂಡಾ ಪೊಲೀಸ್ ಠಾಣಾ(Londa  Police Station) ವ್ಯಾಪ್ತಿಯಲ್ಲಿ ನಡೆದಿದ್ದು, ರಾಮನಗರ ಪೊಲೀಸ್ ಠಾಣೆ ಪೊಲೀಸರು   ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು  ಆಸ್ಪತ್ರೆಗೆ ದಾಖಲಿಸಿ, ಹೆದ್ದಾರಿಯಲ್ಲಿ ಸಂಚಾರ ಸುಗಮಗೊಳಿಸಿದ್ದಾರೆ.

ಇದನ್ನು ಓದಿ : ಸಾಧನೆಯ ಹಾದಿಯಲ್ಲಿ ಧನಲಕ್ಷ್ಮೀ ಮೊಗೇರ. ಭರತನಾಟ್ಯ ರಂಗಪ್ರವೇಶಕ್ಕೆ ಕ್ಷಣಗಣನೆ.

ವಿಮಾನ ದುರಂತ. ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವು.

ಜಾತ್ರೆಗೆ ತೆರಳಿದ್ದಾಗ ಮನೆಗೆ ಬೆಂಕಿ. ಅನ್ಯ ಕೋಮಿನ ಕುಟುಂಬದ ಕೃತ್ಯ ಎಂದ ಮನೆಯವರು. ಎಸ್ಪಿ ಭೇಟಿ.