ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal): ತಾಲೂಕಿನ  ರಾಷ್ಟ್ರೀಯ ಹೆದ್ದಾರಿ 66ರ ಮುಢಭಟ್ಕಳ  ಬೈಪಾಸ್‌ (Bypass) ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ(Accident) ಸ್ಕೂಟಿ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಸುಂದರ ಲಕ್ಷ್ಮಣ ಆಚಾರಿ(64)ಮೃತ ದುರ್ದೈವಿ. ಇವರು ಪುರವರ್ಗ ಗಣೇಶನಗರ(Ganesh nagar) ನಿವಾಸಿ ಎಂದು ಗುರುತಿಸಲಾಗಿದೆ. ಹೆಲ್ಮಟ್ ಧರಿಸಿದ್ದರೂ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಬಿದ್ದಿರುವ ವೇಳೆ ಬಸ್‌ನ ಹಿಂಬದಿ ಚಕ್ರ  ತಲೆಯ ಮೇಲೆ ಹಾದು ಹೋದ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ.

ಕುಂದಾಪುರದಿಂದ ಭಟ್ಕಳ(Kundapur to Bhatkal) ಕಡೆಗೆ ಅತಿವೇಗ ಹಾಗೂ ಅಜಾಗರುಕತೆಯಿಂದ ಬಸ್ ತೆರಳುತಿತ್ತು. ಚಾಲಕ ಎದುರುಗಡೆ ರಸ್ತೆ ಬದಿಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಹೋಂಡಾ ಡಿಯೋ ಸ್ಕೂಟಿಯನ್ನು ಓವರ್‌ಟೇಕ್ ಮಾಡಲು ಯತ್ನಿಸುವ ವೇಳೆ ಎಡಭಾಗದಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಹೆದ್ದಾರಿಯಲ್ಲಿ ಬಿದ್ದ ಸವಾರನ ತಲೆಯ ಮೇಲಿಂದ ಬಸ್ಸಿನ ಹಿಂಬದಿ ಚಕ್ರ ಚಲಿಸಿಕೊಂಡು ಹೋಗಿದೆ.

ಅಪಘಾತದ ಬಗ್ಗೆ ಗುರುರಾಜ ಭಟ್ಕಳ ಪೊಲೀಸ್‌ ಠಾಣೆಯಲ್ಲಿ(Bhatkal Police Station) ದೂರು ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ವಹಿಸಲಾಗಿದೆ. ಮೃತರು ಪತ್ನಿ, ಓರ್ವ  ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸ್ಥಳಕ್ಕೆ ಸಿಪಿಐ ದಿವಾಕರ್ ಪಿ.ಎಂ, ಪಿಎಸ್‌ಐ ನವೀನ್ ನಾಯ್ಕ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಮಕ್ಕಳ ಸಾವು ತರುತ್ತಿರುವ ಕೆಮ್ಮಿನ ಸಿರಪ್. ದೇಶಾದ್ಯಂತ ‌ಕಟ್ಟೆಚ್ಚರ.

ಶಿರಸಿಯಲ್ಲಿ ಅರಣ್ಯವಾಸಿಗಳ ಮಹಾ ಸಂಗ್ರಾಮ