ಭಟ್ಕಳ: ವ್ಯಕ್ತಿಯೊಬ್ಬರ ಅಕೌಂಟ್ ನಿಂದ ಲಕ್ಷಾಂತರ ರೂ. ಹಣ ಲಪಟಾಯಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಮೊಬೈಲ್ ಹ್ಯಾಕ್ ಮಾಡಿದ ಸೈಬರ್ ವಂಚಕರು ಕೃತ್ಯ ಎಸಗಿದ್ದಾರೆ.

ಭಟ್ಕಳ ತಾಲೂಕಿನ ಕೇಶವ  ಮೊಗೇರ ಎಂಬುವವರ ಅಕೌಂಟ್ ನಿಂದ ಹಣ ಕ್ಷಣಾರ್ದದಲ್ಲಿ ಮಾಯವಾಗಿದೆ. ಅವರ ಖಾತೆಯಿಂದ ಸುಮಾರು 4,40,000 ಹಣವನ್ನು ಖದೀಮರು ಲಪಟಾಯಿಸಿದ್ದಾರೆ. ಮೀನುಗಾರಿಕೆ ವೃತ್ತಿ ಮಾಡಿಕೊಂಡು ಒಂದಿಷ್ಟು ಹಣವನ್ನ   ಭಟ್ಕಳ ಬಂದರ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಕರಂಟ್ ಅಕೌಂಟ್ ನಲ್ಲಿಟ್ಟಿದ್ದರು . ಮೇ 10ರಂದು ಸಂಜೆ  ಸುಮಾರಿಗೆ ಇವರ ಮೊಬೈಲ್ ಹ್ಯಾಕ್ ಮಾಡುವ ಮೂಲಕ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿದ್ದಾರೆ.

ಈ ಕುರಿತು ಸೈಬರ್‌ ಕ್ರೈಂ ಅಡಿಯಲ್ಲಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಠಾಣೆ ಪಿ.ಐ. ಚಂದನ ಗೋಪಾಲ ತನಿಖೆ ಕೈಗೊಂಡಿದ್ದಾರೆ.