ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ(Haliyal) : ಸ್ಕೂಟಿ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಮಹಿಳೆಯೋರ್ವಳು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಮಲವಡಿ ಗ್ರಾಮದ(Malavadi Village) ಬಳಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಬಾಲಕರು ಹಾಗೂ ಮತ್ತೋರ್ವ ಮಹಿಳೆ ಗಾಯಗೊಂಡಿದ್ದಾರೆ. ಮಲವಡಿ ಗ್ರಾಮದ ಸುವರ್ಣ ಅಂತ್ರೋಳಕರ (30) ಮೃತ ದುರ್ದೈವಿ.
ದಾಂಡೇಲಿಯ(Dandeli) ನವಗ್ರಾಮದ ನಾಗರಾಜ ಶಾಬಣ್ಣ ಕಾಂಬಳೆ (38) ಎಂಬ ಚಾಲಕ, ತನ್ನ ಟಿಪ್ಪರ್ ನಲ್ಲಿ ಬೂದಿ ತುಂಬಿಕೊಂಡು ಹಳಿಯಾಳದ(Haliyal) ಮಲವಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸಾಗಿಸುತ್ತಿದ್ದ . ಈ ವೇಳೆ ಮಲವಡಿಯ ಸುವರ್ಣ ಅಂತ್ರೋಳಕರ ಅವರು ತಮ್ಮ ಸ್ಕೂಟಿಯಲ್ಲಿ ಹಿಂಬದಿಯಲ್ಲಿ ಶೋಭಾ ಮಾರುತಿ ಕಶೀಲಕರ (38) ಹಾಗೂ ಇಬ್ಬರು ಮಕ್ಕಳಾದ ಆರುಶ (5) ಮತ್ತು ಗೋಕುಳ (3)ರನ್ನು ಕೂರಿಸಿಕೊಂಡು ಚಿಬ್ಬಲಗೇರಿ ಕಡೆ ಹೋಗುವಾಗ, ಟಿಪ್ಪರ್ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ.
ಸುವರ್ಣ ಅವರ ತಲೆಗೆ ಹಾಗೂ ಬಲಕೈಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಶೋಭಾ ಕಶೀಲಕರ ಹಾಗೂ ಆರುಶಗೆ ಗಾಯಗಳಾಗಿದ್ದು, ಇಬ್ಬರಿಗೂ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಳಿಯಾಳ ಠಾಣೆಯ(Haliyal Station) ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ : ಕರ್ತವ್ಯ ಲೋಪ, ಅಧಿಕಾರ ದುರುಪಯೋಗ. ಅಂಕೋಲಾ ಪುರಸಭೆ ಅಧ್ಯಕ್ಷ, ಸದಸ್ಯರ ವಿರುದ್ಧ ಲೋಕಾಯುಕ್ತರಲ್ಲಿ ದೂರು: ಮಂಜುನಾಥ ನಾಯ್ಕ