ನವದೆಹಲಿ : ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಜೂನ್ 8 ರಂದು ಪುನಃ ಗದ್ದುಗೆ ಎರಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಸತತವಾಗಿ ಮೂರನೇ ಸಲ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೆ  ಜೂನ್ ಎಂಟರಂದು ರಂದು  ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ಈಗಾಗಲೇ ಲೋಕಸಭೆ ಚುನಾವಣೆ ಫಲಿತಾಂಶವಾಗಿದ್ದು  ಯಾವ ಪಕ್ಷಕ್ಕೂ ಈ ಬಾರೀ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹೀಗಾಗಿ ಅತಂತ್ರ ಸ್ಥಿತಿ ಎದುರಾಗಿದೆ. ಆದರೆ, ಬಿಜೆಪಿ 240 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಗಮನಾರ್ಹವಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರದಿಂದ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ. ಆದರೆ ಈ ಬಾರಿ ಗೆಲುವಿನ ಅಂತರ ಭಾರೀ ಕಡಿಮೆಯಾಗಿರುವುದು ಬಾರೀ ಚರ್ಚೆಗೆ ಕಾರಣವಾಗಿದೆ. ಮೋದಿ ಅವರು  ಕಾಂಗ್ರೆಸ್ ಅಜಯ್ ರೈ ಅವರನ್ನ  1,52,513 ಮತಗಳ ಅಂತರದಿಂದ  ಸೋಲಿಸಿದ್ದಾರೆ.