ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಉತ್ತರಕನ್ನಡ(Uttarkannada) ಜಿಲ್ಲೆಯ ಶಿರಸಿಯಲ್ಲಿ(Sirsi) ಅನ್ನಭಾಗ್ಯ ಅಕ್ಕಿ(Annabhagya Rice) ಅಕ್ರ ಸಾಗಾಟ ದಂಧೆ ಬಯಲಾಗಿದೆ. ಆಹಾರ ಇಲಾಖೆ(Food Department) ಅಧಿಕಾರಿಗಳು ಮತ್ತು ಪೊಲೀಸರ ಮೆಗಾ ಕಾರ್ಯಾಚರಣೆಯಲ್ಲಿ(Police mega Operation) ಬಾರೀ ಮೊತ್ತದ ಅಕ್ಕಿಯನ್ನ ವಶಪಡಿಸಿಕೊಳ್ಳಲಾಗಿದೆ.
ತಹಶೀಲ್ದಾರ್(Tahasildar) ಪುಟ್ಟರಾಜ ಗೌಡ ಹಾಗೂ ನಗರ ಠಾಣೆ(Town Station) ಪಿಎಸ್ಐ ನರಸಿಂಹಲು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 476 ಚೀಲ ಪಡಿತರ ಅಕ್ಕಿ(Ration Rice) ಸಮೇತ 10 ಚಕ್ರದ ಲಾರಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಸಿದ್ದಾಪುರದಿಂದ ಕೊಲ್ಲಾಪುರ ಕಡೆಗೆ(Siddapur to Kollapur) ಅಕ್ರಮವಾಗಿ ಅಕ್ಕಿ ಸಾಗಿಸಲಾಗುತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳಿಂದ ದಿಢೀರ್ ಕಾರ್ಯಾಚರಣೆ ನಡೆಸಿ ನೀಲೇಕಣಿ ಭೀಮನಗುಡ್ಡ ಕ್ರಾಸ್ ಬಳಿ ಲಾರಿ ಅಡ್ಡಗಟ್ಟಿ ವಶಕ್ಕೆ ಪಡೆದಿದ್ದಾರೆ. ಸಂಬಂಧಪಟ್ಟವರ ಲಾರಿಗೆ ಎಸ್ಕಾರ್ಟ್ ಮಾಡುತ್ತಿದ್ದವರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
