ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ (Panaji) : ಉತ್ತರಕನ್ನಡ ಮೂಲದ(Uttarkannada Native) ಗೋವಾ ಉದ್ಯಮಿಯೋರ್ವರ(Goa Businessmen) ಮೇಲೆ ಗುಂಡಿನ ದಾಳಿ ನಡೆದ ಘಟನೆ ಗೋವಾದ ರಾಜಧಾನಿ ಪಣಜಿ(Goa Capital Panaji) ಸಮೀಪ ನಡೆದಿದೆ.
ಗೋವಾದ ಕ್ಯಾಸಿನ ಪ್ರೈಡ್(Casino Pride), ಮೆಜೆಸ್ಟಿಕ್ ನ ನಿರ್ದೇಶಕ(Majestic Director) ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ(Yallapur) ತಾಲೂಕಿನ ಶ್ರೀನಿವಾಸ್ ನಾಯಕ್ ಅವರ ಮೇಲೆ ಶುಕ್ರವಾರ ರಾತ್ರಿ ಪೈರಿಂಗ್ ನಡೆದಿದೆ. ಶ್ರೀನಿವಾಸ್ ನಾಯಕ್ ಅವರ ಭದ್ರತಾ ಸಿಬ್ಬಂದಿಗಳು ಕೂಡ ತಿರುಗಿ ಗುಂಡು ಹಾರಿಸಿದಾಗ, ದಾಳಿಕೋರರು ಹೈವೇ ದಾಟಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಶ್ರೀನಿವಾಸ್ ನಾಯಕ್ ಮತ್ತು ಅವರ ಭದ್ರತಾ ಸಿಬ್ಬಂದಿಗಳಿಗೂ ಯಾವುದೇ ಗುಂಡು ತಗುಲಿಲ್ಲ ಎನ್ನಲಾಗಿದೆ.
ಗೋವಾದ ರಾಜಧಾನಿ ಪಣಜಿ(Panaji) ಸಮೀಪದ ಪರ್ವಲಿಯಲ್ಲಿರುವ ಮೆಜೆಸ್ಟಿಕ್ ಹೋಟೆಲ್ ಎದುರು ಸಂಭವಿಸಿದೆ. ರಾತ್ರಿ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಆಗುಂತಕರು, ಶ್ರೀನಿವಾಸ್ ನಾಯಕ ಅವರ ಮೇಲೆ ಹೋಟೆಲ್ ನಿಂದ ಹೊರಬರುತ್ತಿದ್ದಂತೆಯೇ ಭೀಕರವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣಕ್ಕಾಗಿ ಘಟನೆ ನಡೆದಿದೆ ಎಂಬುದರ ಪತ್ತೆ ಕಾರ್ಯ ನಡೆಸಲಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
