ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಾರವಾರದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿ(Government Highschool Student) ಕೇಸರ ಪ್ರಶಾಂಶ ಬಂಕಾಪೂರ (14 ವರ್ಷ 11 ತಿಂಗಳು) ಕಾಣೆಯಾಗಿದ್ದಾನೆ. ಈತನು ಕಾರವಾರದಲ್ಲಿ 9 ನೇ ತರಗತಿ ಓದುತ್ತಿದ್ದು, ಕಳೆದ ಎರಡು ವರ್ಷಗಳಿಂದ ಬಿ.ಸಿ.ಎಂ ಹಾಸ್ಟೆಲ್ನಲ್ಲಿ(BCM Hostel) ವಾಸವಿದ್ದನು. ದಿನಾಂಕ 27-
08-2026 ರಂದು ಸಂಜೆ 5.30 ಗಂಟೆಗೆ ಶಾಲೆ ಬಿಟ್ಟ ನಂತರ ಹಾಸ್ಟೆಲ್ಗೂ ಬಾರದೇ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ.
ಬಾಲಕನ ಚಹರೆ: ಗೋಧಿ ಮೈಬಣ್ಣ, ಸಾಧಾರಣ, ಮೈಕಟ್ಟು, ಗೋಲು ಮುಖ, 5.2 ಅಡಿ ಎತ್ತರ, ಬಿಳಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ, ಕನ್ನಡ ಭಾಷೆ ಮಾತನಾಡುತ್ತಾನೆ. ಈ ಚಹರೆಯುಳ್ಳ ಬಾಲಕ ಸಾರ್ವಜನಿಕರಿಗೆ ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಂ ಕಾರವಾರ(Control Room Karwar) 9480805200, ಪಿ.ಐ ಮಹಿಳಾ ಠಾಣೆ ಕಾರವಾರ: 8277987514, ಪಿ.ಎಸ್.ಐ ಮಹಿಳಾ ಠಾಣೆ ಕಾರವಾರ
8277987555 ನ್ನು ಸಂಪರ್ಕಿಸುವಂತೆ ಕಾರವಾರ ಮಹಿಳಾ ಪೊಲೀಸ್ ಠಾಣೆಯ(Women Police Station) ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
