ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ಉತ್ತರಕನ್ನಡ ಜಿಲ್ಲಾ ಗೃಹ ರಕ್ಷಕ ದಳ ಹುದ್ದೆಗೆ(Home Guard Post) ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 140 ಹುದ್ದೆಗೆ ಹೊಸದಾಗಿ ಸೇರ್ಪಡೆಗೊಳಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ.
ಹತ್ತನೇ ತರಗತಿ ಪಾಸ್ ಆಗಿರಬೇಕು, 19 ವರ್ಷಕ್ಕಿಂತ ಮೇಲ್ಪಟ್ಟ , 50 ವರ್ಷ ದೊಳಗಿನ ಪುರುಷ ಮತ್ತು ಮಹಿಳೆಯರಿಗೆ ಮುಕ್ತ ಅವಕಾಶ ಇದೆ ಎಂದು ಹೋಂ ಗಾರ್ಡ್ ಜಿಲ್ಲಾ ಕಮಾಂಡೆಂಟ್ ಡಾ. ಸಂಜು ತಿಮ್ಮಣ್ಣ ನಾಯಕ ತಿಳಿಸಿದ್ದಾರೆ.
ಕಂಪ್ಯೂಟರ್ ಜ್ಞಾನ ಇದ್ದವರು, ಹೆವಿ ಡ್ರೈವಿಂಗ್ ಲೈಸೆನ್ಸ್, ಅಡುಗೆ ಭಟ್ಟರು, ಮೆಕಾನಿಕ್, ಪೈಂಟರ್, ಪ್ಲಂಬರ್ ಹಾಗೂ ಎನ್.ಸಿ.ಸಿ. ಮತ್ತು ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ಇದ್ದವರಿಗೆ ಮೊದಲ ಪ್ರಾಶಸ್ತ್ಯ ನೀಡಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಗೃಹ ರಕ್ಷಕ ದಳದ ಜಿಲ್ಲಾ ಕಛೇರಿ, ಸರ್ವೋದಯ ನಗರ, ದಿವೆಕರ್ ಕಾಮರ್ಸ್ ಕಾಲೇಜ್ ಎದುರು, ಕೋಡಿಭಾಗ, ಕಾರವಾರ ಇಲ್ಲಿ ಅರ್ಜಿಯನ್ನು ಉಚಿತವಾಗಿ ನೀಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿ ನೀಡಲು ಕೊನೆಯ ದಿನಾಂಕ ಮಾರ್ಚ್ 3 ರವರಿಗೆ ಇರುತ್ತದೆ. ತಾಲ್ಲೂಕು ಸರಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್ ಜೊತೆಗೆ ಆಧಾರ ಕಾರ್ಡ್ ಮತ್ತು ಎಸ್.ಎಸ್.ಎಲ್. ಸಿ ಮಾರ್ಕ್ಸ್ ಕಾರ್ಡನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕೃತ ಮಾಡಿಕೊಂಡು ಅರ್ಜಿ ಜೊತೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 08382 -200137 / 226361 ಅಥವಾ 9480898775 ಸಂಪರ್ಕಿಸಬಹುದು.
ಇದನ್ನು ಓದಿ : ಸರ್ಕಾರಿ ಬಸ್ ಬ್ರೇಕ್ ಫೇಲಾಗಿ ಗುಡ್ಡಕ್ಕೆ ಢಿಕ್ಕಿ.
ದೆಹಲಿಯಲ್ಲಿ ಪಕ್ಷದ ಗೆಲುವು. ಉತ್ತರಕನ್ನಡದಲ್ಲಿ ಬಿಜೆಪಿ ಕಾರ್ಯಕರ್ತರ ಹಬ್ಬ.
ಮನೆಯ ಅಂಗಳದಲ್ಲಿದ್ದ ಅಡಿಕೆ ಚೀಲ ಕದ್ದ ಕಳ್ಳ ಪೊಲೀಸರಿಗೆ ಸಿಕ್ಕಿ ಬಿದ್ದ.
ದೆಹಲಿಯಲ್ಲಿ ಬಿಜೆಪಿಗೆ ಗದ್ದುಗೆ. ಆಪ್ ಮನೆಗೆ. ಕಾಂಗ್ರೆಸ್ ಮತ್ತೆ ಸೋಲಿಗೆ.