ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮುಂಡಗೋಡು(Mundagod): ದಾರಿಯಲ್ಲಿ ನಿಂತು  ದರೋಡೆಗೆ ಹೊಂಚು ಹಾಕಿದ ದರೊಡೆಕೋರರ ತಂಡವನ್ನ (Robbery team) ಪೊಲೀಸರು ಹೆಡೆ ಮುರಿ ಕಟ್ಟಲು ಯಶಸ್ವಿಯಾಗಿದ್ದಾರೆ.

ಮುಂಡಗೋಡಿನ(Mundgod) ತಾಲೂಕಿನ ಬಡ್ಡಿಗೇರಿ ಕ್ರಾಸ್(Baddigeri Cross) ಬಳಿ ಎಂಟು ಜನರನ್ನ ಬಂಧಿಸಲಾಗಿದೆ. ಮಲ್ಲಿಕಜಾನ್ ಶೇಖ್(31), ಮಹಮ್ಮದ್ ಇಬ್ರಾಹಿಂ(30), ಶಾಹಿಲ್ ನಂದಿಗಟ್ಟಿ(28), ಹರುನ್ ಶೇಖ್(20), ಮಹಮದ್ ಯೂಸುಫ್(22), ಮಹಮ್ಮದ್ ಇಸ್ಮಾಯಿಲ್(25), ತನ್ವಿರ್ ಅಕ್ಕಿಆಲೂರು(29), ದಾದಾಖಲಂದರ್ ಮಲ್ಲಿಗಾರ(22) ಬಂಧಿತರಾಗಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡ್, ಚಾಕು, ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ. ಕಟ್ಟಿಗೆಯ ಬಡಿಗೆಗಳು,  ಕಬ್ಬಿಣದ ರಾಡ್ಗಳು, ಚಾಕು, ಗಮ್ ಟೇಪ್ ಹಾಗೂ ಖಾರದ ಪುಡಿಯನ್ನು ಇಟ್ಟುಕೊಂಡು ರಸ್ತೆಯಲ್ಲಿ ಬರುಹೋಗುವ ಜನರನ್ನು ತಡೆದು ಅವರಿಗೆ ಹೆದರಿಸಿ ಅವರಿಂದ ಬೆಲೆಬಾಳುವ ವಸ್ತುಗಳು ಹಾಗೂ ದುಡ್ಡುಗಳನ್ನ  ಕಸಿದುಕೊಂಡು ಹೋಗುವ ಉದ್ದೇಶ ಇಟ್ಟುಕೊಂಡು ದರೋಡೆ ಮಾಡುವ ಉದ್ದೇಶದಿಂದ ತಯಾರಿ ಮಾಡಿಕೊಂಡಿದ್ದರು.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ(Police Raid) ಮಾಡಿ ಬಂಧಿಸಿದ್ದಾರೆ. ಮುಂಡಗೋಡು ಪೊಲೀಸ್ ಠಾಣೆಯಲ್ಲಿ(Mundgod Police Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗಿದೆ.

ಇದನ್ನು ಓದಿ : ಕಳ್ಳಾಟದಿಂದ ಇಲಾಖೆ ಮರ್ಯಾದೆ ಕಳೆಯುತ್ತಿದ್ದ ಪೊಲೀಸ್ ಸಸ್ಪೆಂಡ್.

ಚಾಲಕನ ನಿಯಂತ್ರಣ ತಪ್ಪಿ ಟೈಲರ್, ಬಟ್ಟೆ ಅಂಗಡಿಗೆ ನುಗ್ಗಿದ ಲಾರಿ

ದಾರಿ ಜಗಳದಲ್ಲಿ ಮಹಿಳೆ ಮೇಲೆ ಕತ್ತಿ ಬೀಸಿದ ಇಬ್ಬರಿಗೆ ಶಿಕ್ಷೆ.

ಆರಿತು 46 ವರ್ಷ ಬೆಳಗಿದ ಚಿಗಳ್ಳಿ ದೀಪ ! ಕಾದಿದೆಯಾ ಕಂಠಕ.