ಶಿರಸಿ(SIRSI) : ತಾಲೂಕಿನ ದೊಡ್ನಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಕಾಡುಪ್ರಾಣಿಯನ್ನು(WILD ANIMAL) ಬೇಟೆಯಾಡಿದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ಅರಣ್ಯ ಇಲಾಖೆ(FOREST DEPARTMENT) ಬಂಧಿಸಿದೆ.
ಶಿರಸಿ ತಾಲೂಕಿನ ನೆರಬೈಲ್ ಗ್ರಾಮದ ಮಂಜುನಾಥ ಉಮೇಶ್ ನಾಯ್ಕ ಬಂಧಿತ. ಕಾಡು ಕುರಿ ಬೇಟೆಯಾಡಿ ಮಾಂಸ ತೆಗೆಯುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ಮಾಡಿ ಬಂಧಿಸಿದ್ದಾರೆ.
ಬಂಧಿತನಿಂದ ಬಂದೂಕು ವಶಪಡಿಸಿಕೊಳ್ಳಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಇವರ ಮಾರ್ಗದರ್ಶನ ಹಾಗು ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಎಸ್ ಎಸ್ ನಿಂಗಾಣಿ ಇವರ ನೇತ್ರತ್ವದಲ್ಲಿ ವಲಯ ಅರಣ್ಯಾದಿಕಾರಿ ಗಿರೀಶ ಎಲ್ ನಾಯ್ಕ ಉಪ ವಲಯ ಅರಣ್ಯ ಅಧಿಕಾರಿ ಧ್ರುವ ಕುಮಾರ ದಾಳಿ ನಡೆಸಿದ್ದರು.
ಇದನ್ನು ಓದಿ : ಪಂಚಾಯತ್ ಅನುದಾನದಲ್ಲಿ ತಾರತಮ್ಯ
ನಾಡ ಬಂದೂಕಿನ ಗುರಿ ತಪ್ಪಿ ಯುವಕ ಸಾವು