ಹಳಿಯಾಳ(HALIYAL) : ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ(BJP WORKERS) ನಡುವೆ ಮಾರಾಮಾರಿಯಾದ ಘಟನೆ ಶನಿವಾರ ನಡೆದಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ನೇತೃತ್ವದಲ್ಲಿ ಇಂದು ಸದಸ್ಯತ್ವ ಅಭಿಯಾನದ ಕುರಿತು ಸಭೆ ಕರೆಯಲಾಗಿತ್ತು. ಈ ವೇಳೆ ಎರಡು ಬಣಗಳ ನಡುವೆ  ಗಲಾಟೆ ಆರಂಭವಾಗಿತ್ತು.  ಸಭೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಿವಾನಿ ನರಸಾನಿ ಭಾಗವಹಿಸಿದ್ಯಾಕೆ ಎಂದು ಒಂದು ಬಣದ ಕಾರ್ಯಕರ್ತರು ಆಕ್ಷೇಪ ಮಾಡಿದರು. ಮಾತಿಗೆ ಮಾತು ಬೆಳೆದು ಶಿವಾಜಿ ನರಸಾನಿ(SHIVAJI NARASANI) ಅವರನ್ನ ಎಳೆದಾಡಿದ್ದಾರೆ.  ಅಲ್ಲದೇ ಹೊಯ್ ಕೈ ಶುರುವಾಗಿದೆ.

ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಅವರು ಕಾರ್ಯಕರ್ತರನ್ನ ಸಮಾಧಾನಿಸುವ ಪ್ರಯತ್ನ ನಡೆಸಿದರಾದರು ಪ್ರಯೋಜನವಾಗಲಿಲ್ಲ.  ಸ್ಥಳದಲ್ಲಿ ಕೆಲ ಹೊತ್ತಿನವರೆಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಆಗಮಿಸಿ ಗಲಾಟೆ ಶಮನಗೊಳಿಸಿದರು. ಕೊನೆಗೆ ಕಾರ್ಯಕರ್ತರ ಜಗಳದಿಂದ ಸಭೆ ನಡೆಸದೆ ಜಿಲ್ಲಾ ಮುಖಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇದನ್ನು ಓದಿ : ಬಂಧೂಕಿನ ಗುರಿಗೆ ಯುವಕ ಸಾವು

ರೈತನ ಮೇಲೆ ಕರಡಿ ದಾಳಿ

ಕೆರೆಗೆ ಮೀನು ಬಿಟ್ಟು ವಿನೂತನ ಶೃದ್ಧಾಂಜಲಿ.

ಯುರೋಪಿನಲ್ಲಿ ರಾಷ್ಟ್ರಗೀತೆ ಮೊಳಗಿಸಿದ ಭಟ್ಕಳ ಪೋರಿ