ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news): ಉಡುಪಿ/ಅಂಕೋಲಾ: ಬಾಡಿಗೆಮನೆಯಲ್ಲಿ(Rented House) ವಾಸವಾಗಿದ್ದಯುವತಿಯ ಕೊಲೆ ಯತ್ನ ಹಾಗೂ ಚಿನ್ನದ ಸರ(Gold Chain) ಸುಲಿಗೆ ಪ್ರಕರಣವನ್ನು ಮಣಿಪಾಲ ಪೊಲೀಸರು(Manipal Police) ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯೋಗಿತಾ, ಮೇಘಾ ಗೌಡ, ನಾಗರತ್ನ ಹಾಗೂ ಗಗನಾ ಅವರು ಮಣಿಪಾಲ ಶಾಂತಿನಗರದ(Manipal Shantinagar) ಸುದರ್ಶನ ಕಾಂಪ್ಲೆಕ್ಸ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೇ 12ರಂದು ಮೇಘಾ ಗೌಡ, ನಾಗರತ್ನ ಮತ್ತು ಗಗನಾ ಕೆಲಸಕ್ಕಾಗಿ ತೆರಳಿದ್ದು, ಮರುದಿನ ಬೆಳಿಗ್ಗೆ ಸುಮಾರು 7.15ಕ್ಕೆ ವಾಪಸ್ಸು ಬಂದಾಗ ಮನೆಯ ಬಾಗಿಲು ಅರ್ಧ ಸ್ಥಿತಿಯಲ್ಲಿ ತೆರೆದಿರುವುದು ಕಂಡುಬಂದಿದೆ.
ಒಳಗೆ ಹೋಗಿ ನೋಡಿದಾಗ ಅಂಕೋಲಾ ಮೂಲದ(Ankola Native) ಯೋಗಿತಾ ನೆಲದ ಮೇಲೆ ರಕ್ತಸ್ರಾವಗೊಂಡ ಸ್ಥಿತಿಯಲ್ಲಿ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿತ್ತು. ಕೂಡಲೇ ಗಾಯಾಳುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ(Kasturba Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಈ ಬಗ್ಗೆ ಮೇಘಾ ಗೌಡ ಮಣಿಪಾಲ ಪೊಲೀಸ್ ಠಾಣೆಯಲ್ಲಿ(Manipal Police Station) ಪ್ರಕರಣ ದಾಖಲಿಸಿದ್ದಳು. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ವಿಚಾರಣೆ ನಡೆಸಿದ ವೇಳೆ, ಪಕ್ಕದ ಕೊಠಡಿಯಲ್ಲಿ ವಾಸವಾಗಿದ್ದ ಸುಷ್ಮಾ ಅಣ್ಣಪ್ಪ ನಾಯ್ಕ (31) ಎಂಬುವವಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಹಣಕಾಸಿನ ತೊಂದರೆ ಹಾಗೂ ಮನೆಯವರ ಒತ್ತಡದಿಂದಾಗಿ ಯೋಗಿತಾಳ ಚಿನ್ನದ ಸರ ಮತ್ತು ಕಿವಿಯ ಬೆಂಡೋಲೆ ಕಳವು ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಮೇ 12ರ ರಾತ್ರಿ ಯೋಗಿತಾಳ ಜೊತೆಗೇ ಮಲಗಿದ್ದ ಆರೋಪಿ, ಬೆಳಗಿನ ಜಾವ ಕಾಂಕ್ರಿಟ್ ಹೋಲೋ ಬ್ಲಾಕ್ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿ, ಬಳಿಕ ಚಿನ್ನದ ಸರ ಹಾಗೂ ಬೆಂಡೋಲೆಗಳನ್ನು ಅಪಹರಿಸಿದ್ದಾಗಿ ಹೇಳಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣಕ್ಕೆ ಸಂಬಂಧಿಸಿದ ಚಿನ್ನದ ಸರ ಹಾಗೂ ಬೆಂಡೋಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ : ಯುವತಿಯಿಂದ ಮದುವೆಗೆ ನಿರಾಕರಣೆ. ಹೈಟೆನ್ಶನ್ ವರ್ ಏರಿದ ಭೂಪ. ತಾಳಿ, ಅರಿಶಿಣ ಕುಂಕುಮ ತೋರಿಸಿ ಮನವೊಲಿಸಲು ಯತ್ನ.
