ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news): ಬೆಂಗಳೂರು(Bangalore) : ತಾನು ಪ್ರೀತಿಸಿದ ಯುವತಿ ಮದುವೆಯಾಗಲು(Marriage) ನಿರಾಕರಿಸಿದ್ದರಿಂದ ಯುವಕನೋರ್ವ ವಿದ್ಯುತ್ ಟವರ್(Electrical Tower) ಏರಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ(Anekal Taluki) ಚಿನ್ನಯ್ಯನಪಾಳ್ಯದಲ್ಲಿ(Chinnayyana palya) ಈ ಘಟನೆ ನಡೆದಿದೆ. ಸೋಮಶೇಖರ್ ಎಂಬಾತನೇ ಟವರ್ ಏರಿದ ಯುವಕನಾಗಿದ್ದಾನೆ. ಮೂರು ವರ್ಷಗಳಿಂದ ಸೋಮಶೇಖರ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನೆಂದು(Love) ಹೇಳಲಾಗಿದೆ. ಇತ್ತೀಚೆಗೆ ಯುವತಿ ಮದುವೆಯಾಗುವುದಿಲ್ಲ ಎಂದಿದ್ದಳು. ಇದರಿಂದ ಮನನೊಂದ ಆತ ತನ್ನ ಮನೆಯ ಮೇಲ್ಬಾವಣಿಯ ಶೀಟ್ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದ. ನಂತರ ಮನೆ ಹತ್ತಿರ ಇರುವ ಹೈಟೆನ್ನನ್ ವಿದ್ಯುತ್ ಟವರ್ ಏರಿ ಬಿಟ್ಟಿದ್ದಾನೆ.
ತಾನು ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರುವವರೆಗೂ ಕೆಳಗಿಳಿಯುವುದಿಲ್ಲ ಎಂದು ಆತ ಕಂಬದ ಮೇಲಿಂದಲೇ ಚೀರಾಡುತ್ತಿದ್ದ. ಸ್ಥಳೀಯರು ವಿಷಯವನ್ನು ಆನೇಕಲ್ ಪೊಲೀಸರಿಗೆ(Anekal Police) ಹಾಗೂ ಅಗ್ನಿಶಾಮಕ ದಳಕ್ಕೆ(Fire Brigade) ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಯುವಕನನ್ನು ಕೆಳಗಿಳಿಸಲು ಬಾರೀ ಹರಸಾಹಸ ಪಟ್ಟಿದ್ದಾರೆ. ಹೈವೋಲ್ವೇಜ್ ವಿದ್ಯುತ್ ಪ್ರವಹಿಸುವ ಅಪಾಯವಿದ್ದ ಕಾರಣಕ್ಕೆ ಮುನ್ನೆಚ್ಚರಿಕೆಯಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಅಲ್ಲದೇ ಸ್ಥಳಕ್ಕೆ ಯುವತಿಯ ಪೋಷಕರು ಹಾಗೂ ಯುವತಿಯನ್ನು ಕೂಡ ಕರೆತರಲಾಗಿತ್ತು. ಅದೂ ಅಲ್ಲದೇ ತಾಳಿ, ಅರಿಶಿಣ-ಕುಂಕುಮ ಹಿಡಿದು ಮನವೊಲಿಸುವ ಪ್ರಯತ್ನ ನಡೆಸಲಾಗಿತ್ತು. ಅಂತೂ ಮನವೊಲಿಸಿ ಕೆಳಕ್ಕೆ ಇಳಿಸಲಾಗಿದೆ ಎಂದು ಗೊತ್ತಾಗಿದೆ.
ಇದನ್ನು ಓದಿ : ಮಹಿಳೆ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದ ಆರೋಪಿ ಬೆನ್ನಟ್ಟಿ ಹಿಡಿದ ಸಾರ್ವಜನಿಕರು.
