ಅಂಕೋಲಾ(ANKOLA) : ಶಿರೂರು ಬಳಿ ಗುಡ್ಡ ಕುಸಿತದಿಂದ ( SHIRURU LANDSLIDE) ಸಂಪೂರ್ಣ ಮನೆ ಕಳೆದುಕೊಂಡು ಸಂತ್ರಸ್ತ ಕುಟುಂಬಗಳಿಗೆ ಜೆಡಿಎಸ್ ಮಹಿಳಾ ರಾಜ್ಯಾಧ್ಯಕ್ಷೆ ರಶ್ಮಿ ಗೌಡ (RASHMI GOUDA) ಆಸರೆಯಾಗಿದ್ದಾರೆ.
ಉಳುವರೆ ಗ್ರಾಮದ (ULUVARE VILLAGE) ಸಂತ್ರಸ್ತ ಕುಟುಂಬಗಳಿಗೆ ಹಾಗೂ ತಾಲೂಕಿನ ಕೆಲ ವಿಕಲಚೇತನ ಕುಟುಂಬಗಳಿಗೆ ಗೃಹಬಳಕೆಯ ಅವಶ್ಯಕ ಸಾಮಾಗ್ರಿ ನೀಡಿದರು.
ಅವರ ಪರವಾಗಿ ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಮೋಹಿನಿ ನಾಯ್ಕ ಮತ್ತು ತಾಲೂಕಾಧ್ಯಕ್ಷ ಸಂದೀಪ ಬಂಟ ಸೇರಿ ಇತರರು ಉಳುವರೆ ಗ್ರಾಮಕ್ಕೆ ತೆರಳಿ ಸಂತ್ರಸ್ತರಿಗೆ(VICTIMS) ಸಾಮಗ್ರಿ ವಿತರಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ವಿವೇಕ ಪಂಥ್ ಉಪಸ್ಥಿತರಿದ್ದರು.
ಈ ಬಗ್ಗೆ ಮಾತನಾಡಿದ ಜೆಡಿಎಸ್ ಮಹಿಳಾ ರಾಜ್ಯಾಧ್ಯಕ್ಷೆ ರಶ್ಮಿ ಗೌಡ, ಶಿರೂರು ಗುಡ್ಡ ಕುಸಿತದಿಂದ ಹಲವು ಜನರು ತಮ್ಮ ಜೀವ ಕಳೆದುಕೊಂದಿದ್ದಾರೆ. ಇನ್ನು ಕೆಲವರು ತಮ್ಮ ಸೂರು (HOUSE) ಕಳೆದುಕೊಂಡು ಅತಂತ್ರರಾಗಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ ಸಹಕಾರದ ಅವಶ್ಯಕತೆ ಇರುವುದರಿಂದ ನಾವು ಕಿರು ಸಹಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ.