ಕಾರವಾರ(KARWAR) : ಕಳೆದ ರಾತ್ರಿ ಸಂಭವಿಸಿದ ಕಾಳಿ  ಸೇತುವೆ (KALI BRIDGE) ಕುಸಿತದ ತಕ್ಷಣ ಅಲರ್ಟ್(ALERT) ಆಗಿ ಹೆಚ್ಚಿನ ಅವಘಡ ಸಂಭವಿಸದಂತೆ ಪೊಲೀಸ್ ಸಿಬ್ಬಂದಿಯೊಬ್ಬರು ಕರ್ತವ್ಯ ನಿರ್ವಹಿಸಿದ್ದಾರೆ.

ಆ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ತಾಕುಲ ಪೊಲೀಸ್‌ ಠಾಣೆಯ ಸಿಬ್ಬಂದಿ ವಿನಯ ಕಾಣಕೋಣಕರ ರಾತ್ರಿ ಗಸ್ತಿನಲ್ಲಿದ್ದರು. ರಾತ್ರಿ ಸೇತುವೆಯಲ್ಲಿ ಕುಸಿತವಾಗುತ್ತಿದ್ದಂತೆ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಾರೆ. ಜೊತೆಗೆ ಸದಾಶಿವಗಡದಿಂದ ಕಾರವಾರಕ್ಕೆ ತೆರಳುವ ಕೆಲವು ಕಾರು ಮತ್ತು ಲಾರಿಗಳನ್ನ ತಡೆದು ಮುಂದೆ ಸಾಗದಂತೆ ನಿಲ್ಲಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಚಿತ್ತಾಕುಲ ಠಾಣೆಯ ಪಿಎಸ್‌ಐ (CHITTAKUL STATION PSI) ಮಾಂತೇಶ ಸ್ಥಳಕ್ಕೆ ದೌಡಾಯಿಸಿ  ಲಾರಿಯೊಂದು ಬಿದ್ದ ಬಗ್ಗೆ ಕರಾವಳಿ ಕಾವಲು ಪಡೆ (COASTAL SECURITY FORCE) ಇನ್ಸಪೆಕ್ಟರ್ ನಿಶ್ಚಲಕುಮಾರ್ ಅವರಿಗೆ ವಿಷಯ ತಿಳಿಸಿದಾಗ ತಮ್ಮ ಸಿಬ್ಬಂದಿಗಳಾದ ಸುದರ್ಶನ್ ತಾಂಡೇಲ್, ಅಶೋಕ್ ದುರ್ಗೆಕರ್ ಅವರಿಗೆ ಕರೆ ಮಾಡಿದ ತಕ್ಷಣ ಸ್ಥಳೀಯ ಮೀನುಗಾರರ ಸಹಾಯದಿಂದ ಬೋಟ್ ಮೂಲಕ ತೆರಳಿ ಲಾರಿ ಚಾಲಕನನ್ನು ರಕ್ಷಿಸಲಾಗಿದೆ..

ಓರ್ವ ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ನಡುರಾತ್ರಿಯಲ್ಲಿ ಬಾರೀ ದುರಂತವೊಂದು ತಪ್ಪಿದೆ. ವಿನಯ್ ಅವರ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ,   ಹಾಗು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

ಇದನ್ನು ಓದಿ. ಸಚಿವ ಮಾಂಕಾಳ್ ವೈದ್ಯ ಆಕ್ರೋಶ.