ಮಂಗಳೂರು(MANGLORE) : ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಸಮೀಪ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ರೈಲ್ವೆ ಮಾರ್ಗದ ಮೇಲೆ ಮತ್ತೆ ಭೂಕುಸಿತವಾಗಿದೆ.
ಇದರಿಂದ ಹಾಸನ-ಮಂಗಳೂರು (HASAN-MANGALORE) ಮಾರ್ಗದ ರೈಲುಗಳ ಸಂಚಾರ ಸ್ಥಗಿತವಾಗಿದೆ. ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಬಾರೀ ಪ್ರಮಾಣದ ಮಣ್ಣು ಕುಸಿದಿದೆ.
ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದ್ದು ಹಾಸನದಿಂದ ಮಂಗಳೂರು, ಕಾರವಾರ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಘಟನೆಯಿಂದಾಗಿ ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಆರು ಕಡೆಗಳಲ್ಲಿ ಹಲವು ರೈಲುಗಳು ನಿಂತಿವೆ. ಹೀಗಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಮಣ್ಣು ತೆರವು ಕಾರ್ಯಾಚರಣೆ ಇದೀಗ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ತಿದ್ದುಪಡಿಗೆ ಕೊನೆಯ ದಿನ