ಭಟ್ಕಳ : ತಾಲ್ಲೂಕಿನ ಹೆಬಳೆ ಗ್ರಿಡ್ ನಲ್ಲಿ 1*5 ಎಮ್. ವಿ.ಎ ಶಕ್ತಿ ಪರಿವರ್ತಕವು ವಿಫಲಗೊಂಡಿದ್ದರಿಂದ ತಾಲೂಕಿನ ಕೆಲ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ
ಮೇ 24 ಶುಕ್ರವಾರದವರೆಗೆ ಭಟ್ಕಳದ ಹನೀಫಾಬಾದ್, ಕಾರಗದ್ದೆ, ನವಾಯಿತ್ ಕಾಲೋನಿ, ಡಿಪಿ ಕಾಲೋನಿ, ನಾಗಪ್ಪ ನಾಯಕ ರಸ್ತೆ, ಸಾಗರ್ ರೋಡ್, ಕಡವಿನಕಟ್ಟ, ಉಸ್ಮಾನ್ ನಗರ, ಮುಟ್ಟಳ್ಳಿ, ಪುರವರ್ಗ, ಸರ್ಪನಕಟ್ಟ, ಭಟ್ಕಳ ಮಾರ್ಕೆಟ್, ವಿಟಿ ರೋಡ್, ಸೋನಾರಕೇರಿ, ತೆಂಗಿನಗುಂಡಿ ಕ್ರಾಸ್, ಹೊಂಡದಕೇರಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಸಹಕರಿಸುವಂತೆ ವಿನಂತಿ ಮಾಡಿದ್ದಾರೆ.