ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭೋಪಾಲ್(Bhopal) : ತನ್ನ ಲಿವ್ ಇನ್ ಸಂಗಾತಿಯನ್ನು ಕೊಂದು ವ್ಯಕ್ತಿಯೋರ್ವ ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿಟ್ಟು ಜೊತೆಗೆ ಎರಡು ದಿನ ಮಲಗಿದ್ದ ಘಟನೆ ಭೋಪಾಲ್‌ನ(Bhopal) ಗಾಯತ್ರಿ ನಗರದಲ್ಲಿ ಸಂಭವಿಸಿದೆ.
ಸಚಿನ್ ರಜಪೂತ್ (32) ಎಂಬಾತ ರಿತಿಕಾ ಸೇನ್(28) ಎಂಬಾಕೆಯನ್ನ ಜೂನ್ 27ರಂದು ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಎರಡು ರಾತ್ರಿಗಳು ಅದರ ಪಕ್ಕದಲ್ಲಿ ಏನೂ ಆಗಿಲ್ಲ ಎನ್ನುವಂತೆ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೂ ಮುನ್ನ ಇಬ್ಬರ ನಡುವೆ ರಾತ್ರಿ ತೀವ್ರ ವಾಗ್ವಾದವಾಗಿದೆ. ಸಚಿನ್ ಯಾವುದೇ ಕೆಲಸ ಮಾಡದೇ ಅಸೂಯೆಯಿಂದ ಬಳಲುತ್ತಿದ್ದ. ರಿತಿಕಾ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ತನ್ನ ಬಾಸ್ ಜೊತೆ ರಿತಿಕಾಳಿಗೆ ಸಂಬಂಧವಿದೆ ಎಂದು ಆತ ಶಂಕಿಸಿದ್ದ ಎನ್ನಲಾಗಿದೆ.
ಇದೇ ವಿಚಾರದಲ್ಲಿ ಜಗಳವಾಗಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಆದರೆ ನಂತರ ಸಚಿನ್, ಮೃತದೇಹವನ್ನು ಬೇಡ್ ಶಿಟ್ ನಿಂದ ಸುತ್ತಿ ಹಾಸಿಗೆಯ ಮೇಲೆ ಬಿಟ್ಟು. ಅದೇ ಕೊಠಡಿಯಲ್ಲಿ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : ಕೇಣಿಯಲ್ಲಿ ಬಂದರು ಮಾಡಲು ಹುನ್ನಾರು. ಜೆಎಸ್ ಡಬ್ಲೂ ಕಂಪನಿಯಿಂದ ಶಾಲಾ ಮಕ್ಕಳಿಗೆ ಆಮಿಷ. ಸ್ಥಳೀಯರ ತಕರಾರು.