ಜೋಯಿಡಾ :  ತಾಲೂಕಿನ ಹುಡಸಾ ಅರಣ್ಯ(FOREST) ಪ್ರದೇಶದ ರಸ್ತೆಯಲ್ಲಿ  ಹಾಡಹಗಲೇ ನಾಡಬಾಂಬ್ (COUNTRY BOMB) ಸ್ಫೋಟಗೊಂಡ ಘಟನೆ ನಡೆದಿದೆ.

ಘಟನೆಯಲ್ಲಿ ಮೂವರು ಪತ್ರಕರ್ತರು (JOURNALIST) ಬಚಾವ್ ಆಗಿದ್ದಾರೆ. ಜೋಯಿಡಾ ತಾಲೂಕಿನ ಹುಡಸಾ ಅರಣ್ಯ ಇಲಾಖೆ  ಚೆಕ್ ಪೋಸ್ಟ್ (FOREST CHECK POST) ಬಳಿಯೆ ಈ ಅವಘಡ ಸಂಭವಿಸಿದೆ. ಪತ್ರಕರ್ತರಾದ ಸಂದೇಶ ದೇಸಾಯಿ ಹಾಗೂ ಹರೀಶ್ ಭಟ್ ಮತ್ತು ಟಿ ಕೆ ದೇಸಾಯಿ ಅವರು ಕಾರಿನಲ್ಲಿ ಜೋಯಿಡ ಕಡೆ ತೆರಳುತ್ತಿದ್ದಾಗ  ಕಾರಿನ ಟೈಯರನ ಕೆಳಗೆ ಈ ನಾಡಬಾಂಬ್ ಸಿಕ್ಕಿ ಸ್ಪೋಟಗೊಂಡಿರುವ ಮಾಹಿತಿ ಲಭಿಸಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಪಾಯವಾಗಿಲ್ಲ.

ಸ್ಥಳಕ್ಕೆ ಜೋಯಿಡಾ  ಸಿಪಿಐ ಚಂದ್ರಶೇಖರ ಹರಿಹರ, ಪಿಎಸ್ಐ ಮಹೇಶ ಮಾಳಿ, ಮಹಾದೇವಿ ನಾಯಕವಾಡಿ, ಬಾಂಬ್ ಸ್ಕಾಡ್   ಧಾವಿಸಿ ಪರಿಶೀಲನೆ ನಡೆಸಿದ್ದು  ತನಿಖೆ ನಡೆಸಲಾಗಿದೆ.

ಈ ನಾಡಬಾಂಬ್ ಪ್ರಾಣಿಗಳ ಬೇಟೆಗಾಗಿ ಒಯುತ್ತಿರುವಾಗ ಕೆಳಕ್ಕೆ ಬಿದ್ದಿರಬಹುದು. ಇಲ್ಲವೇ ಉದ್ದೇಶಪೂರ್ವಕವಾಗಿ ಇಟ್ಟಿರಬಹುದೆಂದು ಶಂಕಿಸಲಾಗಿದೆ.

ಜೋಯಿಡಾ ಸುತ್ತಮುತ್ತ ವ್ಯಾಪಕ ಪ್ರಮಾಣದಲ್ಲಿ ಪ್ರಾಣಿ ಬೇಟೆ (ANIMALS HUNTING) ನಡೆಯುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎನ್ನಲಾಗಿದೆ. ಆದರೆ ಅರಣ್ಯ ಇಲಾಖೆ (FOREST DEPARTMENT) ಮತ್ತು ಪೋಲಿಸ್ ಇಲಾಖೆ (POLICE DEPARTMENT) ಹೆಚ್ಚಿನ ಕಾಳಜಿ ವಹಿಸಿ ನಾಡಬಾಂಬ್ ತಯಾರಿಸುವವರ ಮತ್ತು ಬಳಕೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು  ಒತ್ತಾಯಿಸುತ್ತಾರೆ.