ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾನ್ಪುರ(Kanpur) :  ಜೋಡಿಯೊಂದು ಚಲಿಸುವ ಬೈಕ್ ನಲ್ಲಿ ರೊಮ್ಯಾನ್ಸ್(Romance) ಮಾಡಿದ ವಿಡಿಯೋ ವೈರಲ್(Video Viral) ಆಗಿದೆ.

ಕಾನ್ಪುರದಲ್ಲಿ ನಡೆದ ಘಟನೆಯಾಗಿದ್ದು ಇವರಿಬ್ಬರು ಗಂಡ ಹೆಂಡತಿಯ, ಅಥವಾ ಪ್ರಿಯಕರ ಹಾಗೂ ಪ್ರಿಯತಮೆಯ ಎಂಬುದು ಗೊತ್ತಾಗಿಲ್ಲ. ಚಲಿಸುತ್ತಿರುವ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media)ವೈರಲ್ ಆದ ನಂತರ ಕಾನ್ಪುರ ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ.

ವೀಡಿಯೊದಲ್ಲಿ ಬೈಕ್ ಸವಾರ ಆಕೆಯನ್ನ  ತನ್ನ ಮಡಿಲಲ್ಲಿ ಹಿಡಿದುಕೊಂಡು ಬೈಕ್‌ ಚಲಾಯಿಸುತ್ತಿರುತ್ತಾನೆ. ಹೆಲ್ಮೆಟ್(Helmet) ಇಲ್ಲದೆ ತನ್ನ ಬೈಕ್ ಅನ್ನು ಓಡಿಸುತ್ತಾನೆ. ಆಕೆ ಬೈಕ್ ಪೆಟ್ರೋಲ್ ಟ್ಯಾಂಕ್(Petrol Tank) ಮೇಲೆ ಕುಳಿತು ಆತನ ಕಡೆಗೆ ಮುಖಮಾಡುತ್ತಾಳೆ.

ಈ ಘಟನೆಯು ಕಾನ್ಪುರದ ಗಂಗಾ ಬ್ಯಾರೇಜ್(Kanpur Ganga Barage) ಪ್ರದೇಶದ ಬಳಿ ನಡೆದಿದೆ. ಇದು ನವಂಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂದು ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ.  ಕಾನ್ಪುರ ಪೊಲೀಸರು ವಿಡಿಯೋ ಕುರಿತು ತನಿಖೆ ಆರಂಭಿಸಿದ್ದಾರೆ. ವಿಡಿಯೊವನ್ನು ಶೇರ್ ಮಾಡಿದ ಎಕ್ಸ್ ಬಳಕೆದಾರರಿಗೆ ಪ್ರತಿಕ್ರಿಯಿಸಿರುವ ಕಾನ್ಪುರ ಪೊಲೀಸರು, “ಸರ್, ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಸಂಬಂಧಪಟ್ಟವರಿಗೆ ತಿಳಿಸಲಾಗಿದೆ” ಎಂದು ಹೇಳಿದ್ದಾರೆ. ಈ ವ್ಯಕ್ತಿ ಕಾನ್ಪುರದ ಆವಾಸ್ ವಿಕಾಸ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಈ ಹಿಂದೆ ಕನಿಷ್ಠ 10 ಬಾರಿ ದಂಡ ಕಟ್ಟಿದ್ದಾನೆ.

ಈ ಮೊದಲು  ಚಲಿಸುವ ಬೈಕ್‌ನಲ್ಲಿ ನಿಂತು ‘ಟೈಟಾನಿಕ್’(Titanic) ಭಂಗಿಯಲ್ಲಿ ನಿಲ್ಲಲು ಪ್ರಯತ್ನಿಸುತ್ತಿರುವುದನ್ನು ನೋಡಿದ ನಂತರ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದಕ್ಕೂ ಮೊದಲು, ಕಾನ್ಪುರದಲ್ಲಿ ಪೊಲೀಸ್ ಅಧಿಕಾರಿಗಳ ಮುಂದೆ ತನ್ನ ಬೈಕ್‌ನಲ್ಲಿ ಅಪಾಯಕಾರಿ ವೀಲಿಂಗ್ ಸಾಹಸ ಪ್ರದರ್ಶಿಸಿದ್ದಕ್ಕಾಗಿ ಕಾನ್ಪುರ ಪೊಲೀಸರು ದಂಡವನ್ನು ವಿಧಿಸಿದ್ದರು. ಆದರೂ ತನ್ನ ಬೈಕ್ ಚಾಳಿಯನ್ನ ಮುಂದುವರಿಸಿದ್ದಾನೆ ಆಸಾಮಿ.

ಇದನ್ನು ಓದಿ : ಬಿಣಗಾ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಕ್ಲೋರಿನ್ ಸೋರಿಕೆ. ಹಲವರು ಅಸ್ವಸ್ಥ . ಸ್ಥಳದಲ್ಲಿ ಬಿಗುವಿನ ವಾತಾವರಣ.

ಕಾಡಿನಲ್ಲಿ ಪೊಲೀಸರ ಕಾರ್ಯಾಚರಣೆ. ಶಸ್ತ್ರಾಸ್ತ್ರಗಳು ಪತ್ತೆ.

ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ವಾಹನಕ್ಕೆ ಬೆಂಕಿ.

ಉದ್ಯಮಿ ಕಿಡ್ನಾಪ್ ಪ್ರಕರಣ. ನಟೋರಿಯಸ್ ಕಿಡ್ನಾಪರ್ಸ್ ಮೇಲೆ ಪೊಲೀಸರ ಪೈರಿಂಗ್.