ಕಾರವಾರ (Karwar): ಬಿಣಗಾ ಕಾರ್ಖಾನೆಯಲ್ಲಿ(Binaga Factory) ಮತ್ತೆ ಕ್ಲೋರಿನ್ ಸೋರಿಕೆಯಾಗಿದೆ(Clorin Leakage). ಪರಿಣಾಮವಾಗಿ 11ಕ್ಕೂ ಹೆಚ್ಚು ಕಾರ್ಮಿಕರು(Labours) ಅಸ್ವಸ್ತರಾಗಿದ್ದಾರೆ.

ಶನಿವಾರ ಮಧ್ಯಾಹ್ನ ರಾಸಾಯನಿಕ ಸೋರಿಕೆಯಾಗಿದ್ದು ಅಸ್ವಸ್ಥ ಕಾರ್ಮಿಕರನ್ನ ಕಾರವಾರದ(Karwar) ಜಿಲ್ಲಾ‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವು ಕಾರ್ಮಿಕರಿಗೂ ಅಪಾಯ ಎದುರಾಗಿದ್ದು ಕಂಪನಿ ಅಧಿಕಾರಿಗಳು ಘಟನೆಯನ್ನ ನಿಗೂಢವಾಗಿ ಇಟ್ಟಿದ್ದಾರೆ.

ಕೆಲ‌ ದಿನದ‌ ಹಿಂದೆ ಕ್ಲೋರಿನ್ ಸೋರಿಕೆಯಿಂದ ಓರ್ವ ಕಾರ್ಮಿಕ ಮೃತಪಟ್ಟಿದ್ದ. ಕಾರ್ಖಾನೆ ಅವ್ಯವಸ್ಥೆ ಬಗ್ಗೆ ಸ್ಥಳೀಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದು ಎರಡು ಗಂಟೆಯಾದರೂ ಕಾರ್ಖಾನೆ ಅಧಿಕಾರಿಗಳು ಸೈರನ್ ಮಾಡಿ ಅಲರ್ಟ್ ಮಾಡದಿರುವುದು ಸಂಶಯಕ್ಕೆ ಕಾರಣವಾಗಿದೆ.

ವಿಷಯ ತಿಳಿದ ಬಿಣಗಾ ಗ್ರಾಮಸ್ಥರು(Binaga Villagers) ಕಂಪನಿ ಮುಂದೆ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಪನಿ ಸುರಕ್ಷತೆ ಬಗ್ಗೆ ಗ್ರಾಮಸ್ಥರ ಸಭೆ ಕರೆಯುವಂತೆ ವಿನಂತಿ ಮಾಡಿದರೂ ಕರೆಯಲಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಆಸ್ಪತ್ರೆಗೆ   ಡಿಎಸ್ ಪಿ ಗಿರೀಶ್ ಹಾಗೂ ಪೊಲೀಸರ ತಂಡ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.