ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ (Honnavar) : ತಾಲೂಕಿನ ಗೇರುಸೊಪ್ಪ ಸಮೀಪ ಹೆದ್ದಾರಿ ಪಕ್ಕದ ಧರೆಗೆ ಖಾಸಗಿ ಮಿನಿ ಬಸ್(Mini Bus) ಗುದ್ದಿದ ಘಟನೆ ಭಾನುವಾರ ಸಂಭವಿಸಿದೆ.
ಘಟನೆಯಲ್ಲಿ ಬಸ್‌ನಲ್ಲಿದ್ದ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕ್ಕಮಗಳೂರಿಂದ ಗೋವಾ(Chikamanglore to Goa) ಕಡೆ ಮಿನಿ ಬಸ್ ತೆರಳುತಿತ್ತು. ಗೇರುಸೊಪ್ಪದಿಂದ(Gerusoppa) ಎರಡು ಕಿ.ಮಿ ದೂರದಲ್ಲಿರುವಾಗ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಳೆದು ಹೆದ್ದಾರಿ ಪಕ್ಕದ ಧರೆಗೆ ಡಿಕ್ಕಿ ಹೊಡೆದಿದೆ. ಅಪಘಾತ ಉಂಟಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನ ಹೊನ್ನಾವರದ(Honnavara) ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು(Honnavar Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಮತ್ತೋರ್ವ ನಕ್ಷಲ್ ಮಹಿಳೆ ಉಡುಪಿಯಲ್ಲಿ ಶರಣು
ಅಂಗಡಿಗೆ ಹೋಗಿ ಬರುತ್ತೇನೆಂದು ಹೋದ ಯುವತಿ ನಾಪತ್ತೆ
ಮೀನು ಮಾರಾಟ ಮಹಿಳೆಯರಿಂದ ಅದ್ದೂರಿ ಮಾಘ ಚೌತಿ ಆಚರಣೆ. ಗಣೇಶನ ಮುಂದೆ ಸಂಭ್ರಮವೋ ಸಂಭ್ರಮ.