ದಾಂಡೇಲಿ (DANDELI) : ಸರ್ಕಾರಿ ಬಸ್ಸಿನಲ್ಲಿ(Government Bus) ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಹೃದಯಘಾತದಿಂದ(Heart Attack) ಸಾವನ್ನಪ್ಪಿದ ಘಟನೆ ನಡೆದಿದೆ.
ಧಾರವಾಡದಿಂದ ದಾಂಡೇಲಿಗೆ(Dharwad to Dandeli) ಸಂಚರಿಸುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ (Belagavi District Yaragatti) ತಾಲೂಕಿನ ಮದ್ದೂರು ಗ್ರಾಮದ ಕಲ್ಲೋಳಿಯವರ ಓಣಿ ನಿವಾಸಿ ಪುಂಡಲಿಕ್ ಚಂದರಗಿ (57) ಹೃದಯಘಾತಕ್ಕೊಳಗಾದ ಪ್ರಯಾಣಿಕ ಎಂದು ತಿಳಿದುಬಂದಿದೆ. ಧಾರವಾಡದಿಂದ ಸಾರಿಗೆ ಬಸ್ಸಿನಲ್ಲಿ (Dharwad Bus) ದಾಂಡೇಲಿಗೆ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತ ಉಂಟಾಗಿದೆ.
ದಾಂಡೇಲಿಗೆ ಬಸ್ ಬರುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಇನ್ನಿತರ ಪ್ರಯಾಣಿಕರು ನಿರ್ವಾಹಕರಿಗೆ (Controller) ಮಾಹಿತಿಯನ್ನು ನೀಡಿದ್ದಾರೆ. ಕುಳಿತಲ್ಲೇ ಮಲಗಿದ್ದ ಸ್ಥಿತಿಯಲ್ಲಿದ್ದ ಇವರು ಏನು ಮಾಡಿದರೂ ಎಚ್ಚರಗೊಳ್ಳದಿದ್ದಾಗ ಬಸ್ಸಿನ ನಿರ್ವಾಹಕ ತಕ್ಷಣವೇ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಗೆ (General Hospital) ಮಾಹಿತಿಯನ್ನು ನೀಡಿ ಆಂಬುಲೆನ್ಸ್ (Ambulance) ತರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಗೆ ತಂದಾಗ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ದಾಂಡೇಲಿ ನಗರ ಠಾಣೆಯ ಪೊಲೀಸರು (Dandeli Town Police Station) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ :ಸಾಹಿತಿ, ಹಿರಿಯ ನ್ಯಾಯವಾದಿ ಶಂಕರ್ ನಾಯ್ಕ ಅವರಿಗೆ ಕಲಾಸಿರಿ ಪ್ರಶಸ್ತಿ ಪ್ರಧಾನ