ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ತಾಲೂಕಿನ ಬೊಗ್ರಿಬೈಲ್‌ನಲ್ಲಿರುವ(Bogribail) ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ (Dumping Yard) ಬೆಂಕಿ ಉಂಟಾಗಿ ತ್ಯಾಜ್ಯ ವಸ್ತುಗಳು ಉರಿದ ಘಟನೆ ಭಾನುವಾರ ನಡೆದಿದೆ.
ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ(Plastic waste) ಬ್ಯಾಟರಿ ಶೆಲ್‌ಗಳು(Battery Shell) ಸೇರಿದಂತೆ ಹಲವು ವಿವಿಧ ಸಾಮಾಗ್ರಿಗಳು ಇದ್ದವು. ಬಿಸಿಲಿನ ಬೇಗೆಗೆ ಬೆಂಕಿ ತಾಗಿ ಈ ರೀತಿ ದೊಡ್ಡದಾದ ಬೆಂಕಿ ಕಾಣಿಸಿಕೊಂಡಿರಬಹುದು ಇಲ್ಲವೇ ಯಾರಾದ್ರೂ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಊಹಿಸಲಾಗಿದೆ.
ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಯತ್ನ ಮಾಡಿದರೂ ಸಾಧ್ಯವಾಗಿಲ್ಲ. ನಂತರ ಜೆ.ಸಿ.ಬಿ(JCB) ಬಳಸಿ ಮಣ್ಣು ಸುರಿದು ಈ ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸಿ ಬೆಂಕಿ ಮುಂದೆ ಹರಡದಂತೆ ಜಾಗ್ರತಿ ವಹಿಸಲಾಗಿದೆ.
ಬೆಂಕಿ ಹೊತ್ತಿಕೊಂಡ ಶೆಡ್‌ನಲ್ಲಿ ಪ್ಲಾಸ್ಟಿಕಗಳಿದ್ದವು. ಪ್ಲಾಸ್ಟಿಕಗಳನ್ನು ಸಿಮೆಂಟ್ ಕಾರ್ಖಾನೆಗೆ(Cement Factory) ಕಳುಹಿಸಿ ವಿಲೇವಾರಿ ಮಾಡಬೇಕಾಗಿತ್ತು. ಆದ್ರೆ ಆಕಸ್ಮಿಕ ಕಾಣಿಸಿಕೊಂಡ ಬೆಂಕಿಯಿಂದ ಪ್ಲಾಸ್ಟಿಕ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಧರೆಗೆ ಢಿಕ್ಕಿ ಹೊಡೆದ ಮಿನಿ ಬಸ್. 9 ಜನರಿಗೆ ಗಾಯ
ಮತ್ತೋರ್ವ ನಕ್ಷಲ್ ಮಹಿಳೆ ಉಡುಪಿಯಲ್ಲಿ ಶರಣು
ಅಂಗಡಿಗೆ ಹೋಗಿ ಬರುತ್ತೇನೆಂದು ಹೋದ ಯುವತಿ ನಾಪತ್ತೆ
ಮೀನು ಮಾರಾಟ ಮಹಿಳೆಯರಿಂದ ಅದ್ದೂರಿ ಮಾಘ ಚೌತಿ ಆಚರಣೆ. ಗಣೇಶನ ಮುಂದೆ ಸಂಭ್ರಮವೋ ಸಂಭ್ರಮ.