ಉಡುಪಿ (Udupi) : ದಲಿತರಿಗೆ ಕಾಂಗ್ರೆಸ್ ಸರ್ಕಾರ (Congres Government) ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ  ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ದಲಿತ ಸಂಘಟನೆಗಳು(Dalitas sanghatane) ಪ್ರತಿಭಟನೆ ನಡೆಸಿವೆ.

ಉಡುಪಿ ಬ್ರಹ್ಮಗಿರಿ ನಾಯರ್ ಕೆರೆ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಅಂಬೇಡ್ಕರ್ ಯುವ ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ದಲಿತ ಸಮುದಾಯವನ್ನ  ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಕಾರರು, ಕಾಂಗ್ರೆಸ್ ಹಠವೋ ದಲಿತ್ ಬಚಾವೋ’ ಘೋಷಣೆ ಕೂಗಿದರು.

ಉಡುಪಿ ಉಸ್ತುವಾರಿ ಸಚಿವೆ(Udupi Incharge Minister) ಮೂರು ತಿಂಗಳಿಗೊಮ್ಮೆ  ಕಾಣುತ್ತಾರೆ ವಿನಃ ಜಿಲ್ಲೆಯಲ್ಲಿ ಯಾವುದೇ ದಲಿತ ಕುಂದು ಕೊರತೆ ಸಭೆ ನಡೆಸುತ್ತಿಲ್ಲ. ದಲಿತ ವಿರೋಧಿ ಅಧಿಕಾರಿಗಳ ವಿರುದ್ಧ ದೂರು ನೀಡಿದರೂ ಕ್ರಮ ಆಗುತ್ತಿಲ್ಲ. ಡಿಸಿ ಮನ್ನಾ ಭೂಮಿ ಹಂಚಿಕೆ ಮಾಡಿಲ್ಲ, ದಲಿತರ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ದಲಿತರ ನೂರಾರು ಸಮಸ್ಯೆಗೆ ಮನವಿ ಮಾಡಿದರೂ ಕಾಂಗ್ರೆಸ್ ಸ್ಪಂದಿಸುತ್ತಿಲ್ಲ ಎಂದು  ದಲಿತ ಹೋರಾಟಗಾರ ಜಯನ್ ಮಲ್ಪೆ ಈ ಸಂದರ್ಭದಲ್ಲಿ ಆರೋಪಿಸಿದರು.

ಇದನ್ನು ಓದಿ : ಇನ್ನೂ ಕೆಲ ದಿನಗಳವರೆಗೆ ಮಳೆ ಸಾಧ್ಯತೆ

ನವೆಂಬರ್ 5, 6 ರಂದು ರಾಜ್ಯ ಚೆಸ್ ಪಂದ್ಯಾವಳಿ

ನಟ ದರ್ಶನ್ ಗೆ ಜಾಮೀನು