ಬೆಂಗಳೂರು(Bangalore) : ಬೆಲೆ ಏರಿಕೆ (Price Hike) ಬಿಸಿಯಿಂದ  ತತ್ತರಿಸಿದ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ.

ರಾಜ್ಯದಲ್ಲಿ ಬಿಎಂಟಿಸಿ (BMTC), ಕೆಎಸ್ಆರ್ಟಿಸಿ (KSRTC) ಸೇರಿ ಎಲ್ಲಾ ರೀತಿಯ ಸಾರಿಗೆ ಬಸ್ಗಳ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ (State Government) ಮುಂದಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಮಹಿಳೆಯರಿಗೆ ಶಕ್ತಿ ಯೋಜನೆಯ(Shakti Scheme) ಹೆಸರನಿನಲ್ಲಿ ಉಚಿತ ಬಸ್ ಪ್ರಯಾಣ ಒದಗಿಸಿ ಪುರುಷರ ಕಿಸೆಯಿಂದ ಕಸಿದುಕೊಳ್ಳುತ್ತಿರುವುದಕ್ಕೆ  ಸರ್ಕಾರ ಮುಂದಾಗಿದೆ ಎಂದು ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಬಸ್ಗಳ ದರವನ್ನು ಶೇ 15 ರಷ್ಟು ಹೆಚ್ಚಳ ಮಾಡಲಾಗಿದೆ.

ಜನವರಿ 5 ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ದರ ಪರಿಷ್ಕರಣೆ ಬಳಿಕ  ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ನಾರ್ಮಲ್ ಬಸ್ಸಿನ ಸದ್ಯದ ದರ ಮತ್ತು 15% ರಷ್ಟು ಹೆಚ್ಚಳದ ದರ :
ಬೆಂಗಳೂರಿನಿಂದ ಹುಬ್ಬಳ್ಳಿ ಸದ್ಯದ ದರ 501 ರೂಪಾಯಿ ಹೆಚ್ಚಳದ ನಂತರ- 576 ರೂಪಾಯಿ.
ಬೆಂಗಳೂರಿನಿಂದ ಬೆಳಗಾವಿ ಸದ್ಯದ ದರ 631 ರೂಪಾಯಿ, ನಂತರ- 725 ರೂಪಾಯಿ.
ಬೆಂಗಳೂರಿನಿಂದ ಕಲಬುರಗಿ ಸದ್ಯದ ದರ 706 ರೂಪಾಯಿ, ನಂತರ 811 ರೂಪಾಯಿ.
ಬೆಂಗಳೂರಿನಿಂದ ಮೈಸೂರು ಸದ್ಯದ ದರ 185 ರುಪಾಯಿ ಇದೆ ನಂತರ – 213 ರೂಪಾಯಿ ಆಗಲಿದೆ.
ಬೆಂಗಳೂರಿನಿಂದ ಮಡಿಕೇರಿ ಸದ್ಯದ ದರ 358 ಹೆಚ್ಚಳದ ನಂತರ 411 ರೂಪಾಯಿ ಆಗಲಿದೆ.
ಬೆಂಗಳೂರಿನಿಂದ ಚಿಕ್ಕಮಗಳೂರು ಸದ್ಯದ ದರ 285 ರೂಪಾಯಿ ನಂತರ 328 ರೂಪಾಯಿ ಆಗಲಿದೆ.
ಬೆಂಗಳೂರಿನಿಂದ ಹಾಸನ ಸದ್ಯದ ದರ 246 ರೂಪಾಯಿ. ಹೆಚ್ಚಳದ ನಂತರ 282 ರೂಪಾಯಿ ಆಗಲಿದೆ.
ಬೆಂಗಳೂರಿನಿಂದ ಮಂಗಳೂರು ಸದ್ಯದ ದರ 424 ಇದೆ, ಹೆಚ್ಚಳದ ನಂತರ 477 ರೂಪಾಯಿ ಆಗಲಿದೆ.
ಬೆಂಗಳೂರಿನಿಂದ ರಾಯಚೂರು ಸದ್ಯದ ದರ 556 ರೂಪಾಯಿ ಇದೆ. ಹೆಚ್ಚಳದ ನಂತರ 639 ರೂಪಾಯಿ ಆಗಲಿದೆ.
ಬೆಂಗಳೂರಿನಿಂದ ಬಳ್ಳಾರಿ ಸದ್ಯದ ದರ 376 ರೂಪಾಯಿ ಇದೆ. ಹೆಚ್ಚಳದ ನಂತರ 432 ರೂಪಾಯಿ ಆಗಲಿದೆ.

ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಜನಸಾಮಾನ್ಯರು ಸೇರಿದಂತೆ ವಿಪಕ್ಷಗಳು ಆಕ್ರೋಶಗೊಂಡಿವೆ. ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತವಾಗಿದೆ.
ಇದನ್ನು ಓದಿ : ಚಲಿಸುತ್ತಿದ್ದ ಬೈಕ್ ಗೆ ಬೆಂಕಿ. ಸವಾರ ಜಸ್ಟ್ ಮಿಸ್.

ಮುಂಡಳ್ಳಿಯಲ್ಲೊಂದು ಸಂತೆ. ಮಕ್ಕಳ ಕೈಯಲ್ಲಿ ಹಣದ ಕಂತೆ.

ಗ್ರಾಮ ಪಂಚಾಯತ್ ಅಧಿಕಾರಿ ಕಿರುಕುಳಕ್ಕೆ ಸಿಬ್ಬಂದಿಗಳಿಂದ ಕೆಲಸಕ್ಕೆ ಬಹಿಷ್ಕಾರ