ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಸಾರಿಗೆ ಸಂಸ್ಥೆಯ ಬಸ್ಸೊಂದು  ಕಂದಕಕ್ಕೆ ಉರುಳುರುಳಿ‌(Bus Turnover) ಬಿದ್ದ ಘಟನೆ ಶನಿವಾರ ರಾತ್ರಿ ಹೊತ್ತಿಗೆ ತಾಲೂಕಿನ ವಡ್ಡಿ ಘಾಟ್(Vaddighat) ತಿರುವಿನಲ್ಲಿ ಸಂಭವಿಸಿದೆ.

ಪರಿಣಾಮವಾಗಿ  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ನಿರ್ವಾಹಕ ಸೇರಿ 49 ಪ್ರಯಾಣಿಕರು‌ ಗಾಯಗೊಂಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಮಟಾ – ಶಿರಸಿ ರಸ್ತೆಯು(Kumta-Sirsi Road) ಅಗಲೀಕರಣ ಕಾಮಗಾರಿಯಿಂದ  ಬಂದ್ ಮಾಡಲಾಗಿದ್ದು ಶಿರಸಿಗೆ ಪ್ರಯಾಣಿಸುವ ಬಸ್‌ ಮಾರ್ಗವನ್ನು ವಡ್ಡಿ ಘಾಟ್(Vaddighat) ರಸ್ತೆ ಮಾರ್ಗವಾಗಿ ಪ್ರಯಾಣಿಸುತ್ತಾರೆ . ರಾಜ್ಯ ಹೆದ್ದಾರಿಯಾದ(State Highway) ಇದು ಘಟ್ಟದ ಪ್ರದೇಶದಲ್ಲಿ ಭಾರಿ ತಿರುವಿದ್ದು, ತಿರುವುಗಳು  ಅಪಾಯಕಾರಿಯಾಗಿದೆ. ಘಾಟ್  ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಕಂದಕಕ್ಕೆ ಬಿದ್ದಿದೆ ಎನ್ನಲಾಗಿದೆ.  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ  49 ಮಂದಿ ಪ್ರಯಾಣಿಕರಲ್ಲಿ ಕೆಲವರಿಗೆ  ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಮೆಲಕ್ಕೆತ್ತಿ ಖಾಸಗಿ ವಾಹನಗಳ ಮೂಲಕ ಅಂಕೋಲಾ(Ankola) ಮತ್ತು ಕುಮಟಾ(Kumta) ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ಪಲ್ಟಿಯಾದ  ಬಸ್ ಕುಮಟಾ ಘಟಕಕ್ಕೆ ಸೇರಿದ್ದಾಗಿದ್ದು ಬಳ್ಳಾರಿಯಿಂದ ಕುಮಟಾ(Ballari to Kumta) ಕಡೆಗೆ ಪ್ರಯಾಣಿಸುತ್ತಿತ್ತು. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಡ್ಡಿಘಾಟ್ ಪ್ರದೇಶದ ತಿರುವುಗಳು ಅಪಾಯಕಾರಿ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ರಸ್ತೆ ಅಗಲಿಕರಣ ಮತ್ತು ತಿರುವು ಸರಿಪಡಿಸಿ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯ ಹಾಗೂ ಜಿ.ಪಂ ಮಾಜಿ ಸದಸ್ಯ ಜಿ.ಎಂ.ಶೆಟ್ಟಿ  ಆಗ್ರಹಿಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಸರ್ಕಾರಿ ನೌಕರರಿಗೆ ಇನ್ನೆರಡು ತಿಂಗಳಲ್ಲಿ ‌ಬಂಪರ್ ಯೋಜನೆ : ಸಿ ಷಡಕ್ಷರಿ.

ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ ಬಯಲು – ಇಬ್ಬರು ಆರೋಪಿತರ ಬಂಧನ

ಹೊನ್ನಾವರ ಮೂಲದ ಯಾಕೂಬ್ ಮುಖ್ಯಾಧಿಕಾರಿಯಾಗಿ ಬಡ್ತಿ.