ಕಾರವಾರ KARWAR : ನಗರದ ರಾಷ್ಟ್ರೀಯ ಹೆದ್ದಾರಿ 66 ಲಂಡನ್ ಬ್ರಿಡ್ಜ್ ಬಳಿ ವಾಹನಗಳ ಸರಣಿ ಅಪಘಾತ ಸಂಭವಿಸಿದೆ.
ಸುರಂಗ ಮಾರ್ಗದ (TUNNEL) ಸಮೀಪವೇ ಮೂರು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ವಾಹನಗಳು ಜಖಂ ಆಗಿವೆ. ಮುರು ಕಾರುಗಳು ಬೇರೆ ಬೇರೆ ರಾಜ್ಯದ ನೋಂದಣಿ ಹೊಂದಿದ್ದಾಗಿವೆ.
ಬಿಣಗಾ ಕಡೆಯಿಂದ ಕಾರವಾರ ಕಡೆ ತೆರಳುತ್ತಿದ್ದ ಗೋವಾ (GOA) ನೊಂದಣಿಯ ಕಾರಿನ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹೊಡೆದಿದ್ದಾನೆ. ಹಿಂಬದಿ ಬರುತ್ತಿದ್ದ ಕರ್ನಾಟಕ (KARNATAKA) ನೊಂದಣಿಯ ಟವೇರಾ ಕಾರಿನ ಚಾಲಕ ತನ್ನ ವೇಗ ಕಡಿಮೆ ಮಾಡಿದ್ದಾನೆ. ಅದರ ಹಿಂದೆ ಇದ್ದ ತೆಲಂಗಾಣ (TELANGANA) ರಾಜ್ಯ ನೊಂದಣಿಯ ಮಹೇಂದ್ರಾ ಕಾರು ಚಾಲಕನ ನಿಯಂತ್ರಣಕ್ಕೆ ಸಗದೇ ತವೇರಾ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಡಿಕ್ಕಿಯ ರಭಸಕ್ಕೆ ಟವೇರಾ ಕಾರು ಮುಂದಿನ ಕಾರಿಗೆ ಬಡಿದು ಮೂರು ಕಾರುಗಳು ಕೂಡ ಜಖಂ ಆಗಿವೆ. ಘಟನೆಯಲ್ಲಿ ಯಾವುದೇ ರೀತಿಯಲ್ಲೂ ಜನರಿಗೆ ತೊಂದರೆಯಾಗಿಲ್ಲ.
ಕಾರವಾರ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.