ಕಾರವಾರ : ಕಳೆದ 10 ವರ್ಷಗಳಿಂದ ಕರಾವಳಿಯಲ್ಲಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ನಿಧಾನಗತಿಯ ಕಾಮಗಾರಿಗೆ ಉತ್ತರಕನ್ನಡ ಜಿಲ್ಲೆಯ ನಾಗರಿಕರು ಅಸಮಾಧಾನಗೊಂಡಿದ್ದಾರೆ.
ಭಟ್ಕಳ ತಾಲೂಕಿನ ಗೊರಟೆ ಗಡಿಯಿಂದ ಕಾರವಾರ ತಾಲೂಕಿನ ಮಾಜಾಳಿ ಗಡಿವರೆಗಿನ ಹೆದ್ದಾರಿ ಅರೆಬರೆಯಾಗಿ ಇದೆ. ಸಂಬಂಧಪಟ್ಟ ಐಆರ್ಬಿ ಕಂಪನಿ ಮಾಡಿದ ಕೆಲಸ ಬರ್ಕತ್ ಆಗಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ನಿದರ್ಶನವಿದೆ.
ಅಮದಳ್ಳಿ ಗ್ರಾಮದ ಅಚ್ಚಕನ್ಯೆ ದೇವಸ್ಥಾನದ ಬಳಿ ಹೆದ್ದಾರಿ ಕುಸಿದು ಈಜು ಕೊಳವಾಗಿದೆ. ಯಾವುದೇ ವೈಜ್ಞಾನಿಕ ವಿಧಾನವನ್ನ ಅನುಸರಿಸದೆ ಮಾಡಿದ್ದರಿಂದ ಈ ರೀತಿ ಆವಾಂತರ ಸೃಷ್ಟಿಯಾಗಿದೆ. ಪುಣ್ಯಕ್ಕೆ ಈ ಮಾರ್ಗದ ಮೂಲಕ ವಾಹನ ಓಡಾಡದೆ ಇರೋದ್ರಿಂದ ಅನಾಹುತ ತಪ್ಪಿದೆ ಅಂತಾ ಹೇಳಬಹುದು.
ಅದಕ್ಕೆ ತಿಳಿದವರು ಹೇಳ್ತಾರೆ. ಯೋಚಿಸಿ, ಯೋಜಿಸಿ ಕಾಮಗಾರಿ ಮಾಡಿ ಎಂದು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರಾವಳಿಯ ರಾಷ್ಟ್ರೀಯ ಹೆದ್ದಾರಿ ಈ ತರಹದ ಘಟನೆಗಳಿಗೆ ದೊಡ್ಡ ಸಾಕ್ಷಿಯಾಗಬಹುದು. ಮಳೆಗಾಲದಲ್ಲಿ ನೀರಿನ ಹರಿವು ನೋಡಿ ಗಟಾರ ನಿರ್ಮಿಸುವುದು. ಅಡೆತಡೆಗಳಿಲ್ಲದೆ ನೋಡಿಕೊಳ್ಳಬೇಕು. ಇಲ್ಲದೆ ಮಾಡಿದ್ರೆ ಹೆದ್ದಾರಿಯಲ್ಲಿ ಪ್ರಪಾತಾವೆ ನೋಡಬೇಕಾದೀತು. ಐ ಆರ್ಬಿ ಇನ್ನಾದರೂ ಎಚ್ಛೆತ್ತುಕೊಂಡು ಹೆದ್ದಾರಿ ಮತ್ತು ನಾಗರಿಕರ ಸುರಕ್ಷತೆ ಕಾಪಾಡುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಜನರ ರೊಚ್ಚಿಗೇಳಬೇಕಾದಿತು ಎಂದು ನಾಗರೀಕರೇ ಎಚ್ಚರಿಸಿದ್ದಾರೆ.