ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal):  ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ, ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ನೀರು, ಹುಲ್ಲು ಕೊಡದೆ ಜಾನುವಾರುಗಳನ್ನು(Cattles) ಸಾಗಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನುಪೊಲೀಸರು ಬಂಧಿಸಿದ್ದಾರೆ.

ಹೊನ್ನಾವರ ಕಡೆಯಿಂದ ಭಟ್ಕಳದ(Honnavar to Bhatkal)  ಸಾಗಿಸುತ್ತಿದ್ದಾಗ ಶಿರಾಲಿ ಚೆಕ್‌ಪೋಸ್ಟ್ ನಲ್ಲಿ (shirali check post) ಭಟ್ಕಳ ಗ್ರಾಮೀಣ ಠಾಣೆ(Bhatkal Rural Police Station) ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.   ಈ ಸಂದರ್ಭದಲ್ಲಿ ಸುಮಾರು 5ಲಕ್ಷ.70 ಸಾವಿರ ರೂ ಮೌಲ್ಯದ19 ಜಾನುವಾರುಗಳನ್ನು ರಕ್ಷಿಸಲಾಗಿದೆ.

ಹಾವೇರಿ ಮೂಲದ(Haveri Native)  ಚೇತನ ತಂದೆ ನಂದೀಶ ಕಡ್ಲಿ (26), ಸಂತೋಷ ತಂದೆ ಧ್ಯಾನಪ್ಪ ಬೋರದ (25), ಗದಗದ (Gadag) ದುರ್ಗಪ್ಪ ತಂದೆ ಫಕ್ಕೀರಪ್ಪ ಛಲವಾದಿ (50) ಬಂಧಿತರಾಗಿದ್ದಾರೆ.

ಭಟ್ಕಳ ಗ್ರಾಮೀಣ ಠಾಣೆ(Bhatkal Rural Station) ಪಿ.ಎಸ್.ಐ ಭರಮಪ್ಪ ಬೆಳಗಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.  ಸಿಬ್ಬಂದಿಗಳಾದ ಅಣ್ಣಪ್ಪ ನಾಯ್ಕ, ರಾಮಯ್ಯ ನಾಯ್ಕ, ಬಸವನಗೌಡ ಪಾರ್ಟಿಲ್, ಚಾಲಕ ದೇವರಾಜ್ ಮೊಗೇರ ಇದ್ದರು.

ಇದನ್ನು ಓದಿ : ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ

ಬಾರೀ ಮಳೆಯಿಂದ ಕೊಚ್ಚಿ ಹೋದ ಹೆದ್ದಾರಿ.  ಶಿರಸಿ-ಕುಮಟಾ ರಸ್ತೆ ಸಂಚಾರ ತಾತ್ಕಾಲಿಕ ಸ್ಥಗಿತ.

ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು. ಪೋಷಕರು ಕಂಗಾಲು