ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news) ಜೋಯಿಡಾ(Joida) : ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಾಹನವನ್ನ ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ಅನಮೋಡ ಪ್ರದೇಶದಲ್ಲಿ (Anmod Area) ನಡೆದಿದೆ.

ರಾಮನಗರ ಪೊಲೀಸರು(Ramanagar Police) ನಡೆಸಿದ ಕಾರ್ಯಾಚರಣೆಯಲ್ಲಿ   ಮೂರು ಐಷರ್ ವಾಹನಗಳನ್ನ ಜಪ್ತಿ ಮಾಡಲಾಗಿದೆ. ಒಟ್ಟು  36 ಎಮ್ಮೆಗಳನ್ನು ರಕ್ಷಣೆ(Buffalo Rescue) ಮಾಡಿ  ಆರು ಮಂದಿಯನ್ನು ಬಂಧಿಸಲಾಗಿದೆ.

ಎಮ್ಮೆಗಳನ್ನು ಅಕ್ರಮವಾಗಿ  ಸಾಗಿಸುತ್ತಿರುವ ಬಗ್ಗೆ ಸ್ಥಳೀಯ ನಾಗರಿಕರು ಗಮನಿಸಿ ವಾಹನಗಳನ್ನು ತಡೆದು ಪರಿಶೀಲಿಸಿದಾಗ, ಎಮ್ಮೆಗಳನ್ನು  ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ  ರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮೂರು ಐಷರ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಮಹಾರಾಷ್ಟ್ರದ ಗಢಿಂಗ್ಲಿಯಿಂದ ಗೋವಾದ(Maharashtra to Goa) ಕಸಾಯಿಖಾನೆಗಳಿಗೆ ಅನಮೋಡ ಮಾರ್ಗವಾಗಿ(Anmod Route) ಎಮ್ಮೆಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪ್ರತಿ ಐಷರ್ ವಾಹನದಲ್ಲಿ ತಲಾ 12 ಎಮ್ಮೆಗಳಂತೆ ಒಟ್ಟು 36 ಎಮ್ಮೆಗಳ ಸಾಗಿಸಲಾಗುತ್ತಿತ್ತು. ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯದ(Maharashtra to Karnataka State) ಮೂಲಕ ಗೋವಾಕ್ಕೆ ಎಮ್ಮೆಗಳನ್ನು ಸಾಗಿಸಲು ಅಗತ್ಯವಿರುವ  ಕರ್ನಾಟಕ ರಾಜ್ಯ ಪರವಾನಗಿ ಇರಲಿಲ್ಲ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, ಆರೋಪಿಗಳ ವಿರುದ್ಧ ಅಕ್ರಮ ಪ್ರಾಣಿ ಸಾಗಣೆ ತಡೆ ಕಾಯ್ದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ರಾಮನಗರ ಪೊಲೀಸರು(Ramanagar Police) ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಮದುವೆಗೆ ಚಿನ್ನ ಖರೀದಿಸಲು ಬಂದು ನಾಪತ್ತೆಯಾದ ಯುವಕ.  ವಿದೇಶದಲ್ಲಿದ್ದವ ಕೂಲಿಯಾಗಿದ್ದೇಕೆ?

ಭಟ್ಕಳ ಮಹಿಳೆಗೆ ಆಶ್ಲೀಲ ಸಂದೇಶ. ಬೆಂಗಳೂರಿನಲ್ಲಿ ಆಸಾಮಿ ಬಂಧನ.