ಚಿಕ್ಕಮಗಳೂರು : ಯುವಕರಿಬ್ಬರೂ ಸಾರ್ವಜನಿಕ ಸ್ಥಳದಲ್ಲಿ ತಲವಾರ್ ಪ್ರದರ್ಶಿಸಿದ್ದಕ್ಕೆ ಬಂಧಿಸಿದ ಘಟನೆ ಎನ್ ಆರ್ ಪುರದಲ್ಲಿ ನಡೆದಿದೆ.

ಬೆಟ್ಟಗೆರೆ ನಿವಾಸಿಗಳಾದ ಮೆಕಾನಿಕ್ ಸೈಯದ್ ಸಲ್ಮಾನ್‌ (22) ಮತ್ತು ಕಾರ್ಪೆಂಟ‌ರ್ ಮಹಮ್ಮದ್‌ ಸಾದಿಕ್ (25) ಬಂಧಿತರಾಗಿದ್ದಾರೆ. ಇವರಿಬ್ಬರ ಮೇಲೆ ಲಾಂಗ್ ಝಳಪಿಸುತ್ತ ಸೆರೆಹಿಡಿದ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.  ಅಲ್ಲದೇ ವಾಹನದಲ್ಲಿ ಲಾಂಗ್ ಇರಿಸಿಕೊಂಡು ಸಂಚರಿಸಿದ ಆರೋಪವಿತ್ತು.

ಕಪ್ಪು ಬಣ್ಣದ ಕಾರಿನಲ್ಲಿ ಲಾಂಗ್ ಇರಿಸಿಕೊಂಡು ಹೆದರಿಕೆ ಹುಟ್ಟಿಸುವ ರೀತಿಯಲ್ಲಿ ಶೆಟ್ಟಿಕೊಪ್ಪ ಗ್ರಾಮದ ಕಡೆಯಿಂದ ಬರುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟ‌ರ್ ಗುರುದತ್ ಕಾಮತ್ ನೇತೃತ್ವದಲ್ಲಿ ಪೊಲೀಸರು ಬಂಧನಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದರು. ತಾಲ್ಲೂಕಿನ ಸೌತಿಕೆರೆ ಗ್ರಾಮದ ಬಳಿ ಕಾರನ್ನು ತಡೆದು ಪರಿಶೀಲಿಸಿದಾಗ ಲಾಂಗ್ ಇರುವುಡಿ ಕಂಡುಬಂದಿದೆ. ತಕ್ಷಣ ಇಬ್ಬರನ್ನೂ ಬಂಧಿಸಲಾಗಿದೆ. ಜನರೆಲ್ಲಾ ನಮ್ಮನ್ನು ನೋಡಿ  ಹೆದರಿಕೊಳ್ಳಬೇಕು. ಹೀಗಾಗಿ ಲಾಂಗ್ ತೋರಿಸುತ್ತ ಓಡಾಡುತ್ತಿರುವುದಾಗಿ ಆರೋಪಿಗಳು  ಪೊಲೀಸರಲ್ಲಿ ಹೇಳಿದ್ದಾರೆ.

ಆಯುಧ ಮತ್ತು ಕಾರು ವಶಪಡಿಸಿಕೊಂಡಿರುವ ಪೊಲೀಸರು ಸಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. .