ಭಟ್ಕಳ : ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಹಿರಿಯ ಕಾರ್ಯಕರ್ತ ಭಟ್ಕಳ ಜನತೆಗೆ ಚಿರಪರಿಚಿತರಾಗಿದ್ದ ಚಂಪಕ್ ಸ್ಕ್ರೀನ್ ಪ್ರಿಂಟರ್ಸ್ ಮಾಲಿಕ ಸಚಿನ್ ಮಹಾಲೆ ಅಕಾಲಿಕವಾಗಿ ನಿಧಾನರಾಗಿದ್ದಾರೆ.
ಅವರಿಗೆ 45 ವರ್ಷ ವಯಸ್ಸಾಗಿತ್ತು. ಭಟ್ಕಳ ನಗರ ಬಿಜೆಪಿಯಲ್ಲಿ ಸದಾ ಕಾರ್ಯಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದ ಸಚಿನ್ ಪಕ್ಷದ ಹಲವಾರು ಜವಬ್ದಾರಿ ನಿರ್ವಹಿಸಿದ್ದರು.
ಹೈಸ್ಕೂಲ್ ಜೀವನದಲ್ಲಿಯೇ ಪ್ರಿಂಟಿಂಗ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಅವರು ಸರಳ ಸಜ್ಜನ, ಮೃದು ಸ್ವಭಾವದ ವ್ಯಕ್ತಿಯಾಗಿದ್ದರು. ಭಟ್ಕಳದಂತ ಪಟ್ಟಣದಲ್ಲಿ ಸ್ಕ್ರಿನ್ ಪ್ರಿಂಟಿಂಗ್ ಉದ್ಯಮವನ್ನ ತಮ್ಮ ಸಹೋದರ ವಿವೇಕ್ ಮಹಾಲೆ ಅವರೊಂದಿಗೆ ಮೊದಲು ಆರಂಭಿಸಿ ಇಂದಿಗೂ ಕೂಡ ಮುಂದುವರಿಸಿಕೊಂಡು ಬಂದಿದ್ದರು.
ಎಲ್ಲರೊಂದಿಗೆ ಸದಾ ಹಸನ್ಮುಖಿಯಾಗಿ ಬೆರೆಯುತ್ತಿದ್ದ ಸಚಿನ್ ಹಠಾತ್ ಅನಾರೋಗ್ಯದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಪತ್ನಿ, ಪುತ್ರ, ಸಹೋದರ ವಿವೇಕ ಮಹಾಲೆ, ಸಹೋದರಿ ಮತ್ತು ಅಪಾರ ಬಂಧುಬಳಗ ಸ್ನೇಹಿತರನ್ನ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಟ್ಕಳ ಜನತೆ ಪ್ರಾರ್ಥಿಸಿದ್ದಾರೆ.