ಅಂಕೋಲಾ(ANKOLA) :  ತಾಲೂಕಿನ ಶಿರೂರು ಗುಡ್ಡ ಕುಸಿತ(SHIRURU LANDSLIDE)ದಲ್ಲಿ ಮನೆ ಮಾಲೀಕನನ್ನ ಕಳೆದುಕೊಂಡ ಶ್ವಾನ ಪರಿತಪಿಸುತ್ತಿದೆ. ಪಾಪ ತಿಂಗಳಾದರೂ ಮಾಲೀಕನ ಪತ್ತೆಯಿಲ್ಲ. ಅನಾಥವಾದ ಶ್ವಾನಗಳನ್ನ  ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಸಾಕಲು ನಿರ್ಧರಿಸಿದ್ದಾರೆ.

ಜುಲೈ 16 ರಂದು ಬೆಳಿಗ್ಗೆ ಸಂಭವಿಸಿದ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಹಲವರು ಪ್ರಾಣ ಕಳೆದುಕೊಂದಿದ್ದಾರೆ.  ಹೆದ್ದಾರಿ ಬದಿಗೆ ಇರುವ  ಲಕ್ಷ್ಮಣ ನಾಯ್ಕ ಕುಟುಂಬದವರು ಮೃತರಾಗಿದ್ದಾರೆ.  ಇವರೆಗೂ ಯಾರ ಮುಖವನ್ನು ನೋಡದ ಶ್ವಾನ ಅನಾಥವಾಗಿತ್ತು. ತಿಂಗಳುಗಳ ಕಾಲ ಮನೆಯವರನ್ನು ಹುಡುಕುತ್ತಿರುವ ಶ್ವಾನಕ್ಕೆ ಯಾರು ಇಲ್ಲಾ. ಶ್ವಾನ ರೋಧನೆ ಮನ ಕಲಕುವಂತಿದೆ.  ಸ್ಥಳಕ್ಕೆ ಬಂದವರು ಯಾರಾದ್ರೂ ಪ್ರೀತಿ ತೋರಿಸಿ  ಬಿಸ್ಕೆಟ್  ತಿಂಡಿ ನೀಡಿದರೆ ತಿನ್ನುತಿತ್ತು. ಅಲ್ಲದೇ ಹಲವು ಕಡೆಗಳಿಂದ ಶ್ವಾನ ನೀಡುವಂತೆ ಸ್ಥಳೀಯರಿಗೆ ಕರೆ ಬರುತಿತ್ತು.

ಶ್ವಾನದ ಮಾಲೀಕನ ಪ್ರೀತಿಗೆ ಸೋತ ಕಾರವಾರ ಪೊಲೀಸ್‌ ವರಿಷ್ಟಾಧಿಕಾರಿ ಎಂ ನಾರಾಯಣ ಅವರು  ತಾವೇ ಸಾಕುವ ನಿರ್ಧಾರ ಮಾಡಿ ಕಾರವಾರದ ತಮ್ಮ ಮನೆಗೆ ಕರೆದೊಯಿದ್ದಾರೆ. ಪೊಲೀಸ್‌ ವರಿಷ್ಟಾಧಿಕಾರಿಗಳ ಶ್ವಾನ ಪ್ರೀತಿಗೆ ಅಂಕೋಲಾದ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.