ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾವಣಗೆರೆ(Davanagere) : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಶಾಮನೂರು ಡೈಮಂಡ್(shamanuru Daimond) ಶಿವ ಗಂಗಾ ಕಪ್(Shivaganga Cup) ರಾಷ್ಟ್ರ- ಮಟ್ಟದ ಬಾಲ್ ಟೆನಿಸ್ ಕ್ರಿಕೆಟ್ ಟೂನಿ೯ಯಲ್ಲಿ ಪ್ರಸಾದ್, ಫ್ರೆಂಡ್ಸ್ ಬೆಂಗಳೂರು(Friends Bangalore) ತಂಡದ ಪ್ರಸಾದ್ ನೆರಳಕಟ್ಟೆ (Prasad Neralekatte) 6 ಎಸೆತಗಳಲ್ಲಿ 6 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.
ಭಾನುವಾರ ನಡೆದ ಪಂದ್ಯಾವಳಿಯಲ್ಲಿ ಅಲಿ ಫೈಟರ್ಸ್ ದಾವಣಗೆರೆ(Ali Fighters Davanagere) ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಎಡಗೈ ಬೌಲರ್ ಪ್ರಸಾದ್ ನೇರಳೆಕಟ್ಟೆ (Prasad Neralekatte) ಎಸೆದ ಇನಿಂಗ್ಸ್ನ 4ನೇ ಓವರ್ನ ಮೊದಲ ಎಸೆತದಲ್ಲಿ ಅಲಿ ಫೈಟರ್ಸ್ ತಂಡದ ರಹಮಾನ್ ಲಾಂಗ್ ಆಫ್ನಲ್ಲಿ ಕ್ಯಾಚ್ ನೀಡಿದರು. ಎರಡನೇ ಎಸೆತದಲ್ಲಿ ಅಜಯ್ ಎಲ್ಬಿಡಬ್ಲ್ಯು ಆದರು. ಮೂರನೇ ಎಸೆತದಲ್ಲಿ ಚೆಂಡನ್ನ ವಿಕೆಟ್ ಕೀಪರ್ಗೆ ಕೊಡುವಲ್ಲಿ ಸಫಲರಾದರು. ನಾಲ್ಕನೇ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ವಿಕ್ರಂ, ಮಿಡ್ ಆನ್ ಬಳಿ ಕ್ಯಾಚ್ ನೀಡಿ ಫೇವಿಲಿಯನ್ ಗೆ ನಿರ್ಗಮಿಸಿದರು. ನಂತರದ ಬಾಲ್ ಮೂಲಕ ಎದುರಾಳಿ ಆಟಗಾರನನ್ನು ಎಲ್ ಬಿಡಬ್ಲ್ಯು ಬಲೆಗೆ ಕೆಡವಿದರು. ಕೊನೆಯ ಎಸೆತದಲ್ಲಿ ಸನತ್ ವಿಕೆಟ್ ಪಡೆದು ಸಂಭ್ರಮಿಸಿ ಕೇಕೆ ಹಾಕಿದರು.
ಈ ಹಿಂದೆ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ (State Level Cricket Tournament) 6 ಬಾಲ್ ಗೆ ಆರು ಸಿಕ್ಸರ್, ಆರು ಬಾಲ್ ಗೆ ಆರು ಬೌಮ್ಡರಿ ಬಾರಿಸಿ ದಾಖಲೆ ಮಾಡಿದ್ದರು. ಇದೀಗ ಪ್ರಸಾದ್ ನೇರಳೆಕಟ್ಟೆ ಆರು ಏಸೆತಕ್ಕೆ ಆರು ವಿಕೆಟ್ ಪಡೆದಿರುವುದು ಸಂತಸಕ್ಕೆ ಕಾರಣವಾಗಿದೆ.
ಪ್ರಸಾದ ಸಾಧನೆಗೆ ಕ್ರಿಕೆಟಾಭಿಮಾನಿಗಳಿಂದ ಅಭಿನಂದನೆಯ ಮಹಾಪುರಾವೆ ಹರಿದುಬರುತ್ತಿದೆ. ಕಳೆದ ಎಂಟು ವರ್ಷಗಳಿಂದ ಪ್ರಸಾದ್, ಫ್ರೆಂಡ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿದ್ದಾರೆ.
ಇದನ್ನು ಓದಿ : ಪಶ್ಚಿಮ ಘಟ್ಟದಲ್ಲಿ ಭೂಕಂಪನ