ಕಾರವಾರ (Karwar): ಉತ್ತರಕನ್ನಡ(Uttarakannada) ಜಿಲ್ಲೆಯಲ್ಲಿ ಭೂಕಂಪನ(Earthquake) ಆಗಿದೆ, ಇಲ್ಲವೋ ಎಂಬುದಕ್ಕೆ ಉತ್ತರ ಸಿಕ್ಕಿದೆ. ಡಿಸೆಂಬರ್ ಒಂದರಂದು ಆದ ಘಟನೆಗೆ ವಿಜ್ಞಾನಿಗಳು ಖಚಿತ ಮಾಹಿತಿ ನೀಡಿದ್ದಾರೆ.

ಇದು ಪಶ್ಚಿಮ ಘಟ್ಟದಲ್ಲಾಗುತ್ತಿರುವ(Western Ghats) ಅವೈಜ್ಞಾನಿಕತೆಗೆ(Unscientific) ಎಚ್ಚರಿಕೆಯ ಗಂಟೆ ಕೂಡ ಆಗಿದೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ(Siddapur), ಶಿರಸಿ(Sirsi) ಹಾಗೂ ಕುಮಟಾ(Kumta) ಭಾಗದಲ್ಲಿ ಭೂಮಿ ಕಂಪಿಸಿರುವುದು ಸತ್ಯವಾಗಿದೆ.  ಪಶ್ಚಿಮ ಘಟ್ಟದಲ್ಲಿ ಸುಮಾರು ಐದು ಕಿ.ಮೀ. ಆಳದಲ್ಲಿ ಆಗಿದೆ ಎಂದು ವಿಜ್ಞಾನಿಗಳು(Scientist) ಅಂದಾಜಿಸಿದ್ದಾರೆ. ಅದರ ತೀವ್ರತೆ 3.5 ಇತ್ತು ಎನ್ನಲಾಗಿದೆ. ಭಾನುವಾರ ಬೆಳಗ್ಗೆ 11.59ಕ್ಕೆ ಈ ಭೂಕಂಪ ನಡೆದಿದೆ ಎಂದು ದೆಹಲಿಯ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಭೂಕಂಪನಶಾಸ್ತ್ರ ವಿಜ್ಞಾನಿ ಡಾ. ಸಂಜಯ ಪ್ರಜಾಪತಿ ಖಚಿತಪಡಿಸಿದ್ದಾರೆ.

ಹೆಚ್ಚಿನ ಪ್ರಮಾಣದ ಮಳೆಯಾಗಿ  ಪ್ರಾಕೃತಿಕ ಪ್ರಕ್ರಿಯೆಯಲ್ಲಿ ದುರ್ಬಲ ಸ್ಥಳದಲ್ಲಿ ಈ ಭೂಕಂಪನ ಆಗಿದೆ ಎಂದು ಅವರು ತಿಳಿಸಿದ್ದಾರೆ. ಹಿಂದೆ ಎರಡು ದಶಕಗಳ ಇತಿಹಾಸದಲ್ಲಿ ಒಮ್ಮೆಯೂ ಆ ಪ್ರದೇಶದಲ್ಲಿ ಭೂಕಂಪನ ಆಗಿರಲಿಲ್ಲ.  1998ರಲ್ಲಿ ಗೋವಾದಲ್ಲಿ(Goa) ಒಮ್ಮೆ ಭೂಕಂಪನ ಆಗಿತ್ತು. ಅಲ್ಲಿ ಭೂಕಂಪದ ತೀವ್ರತೆ 3.6 ಆಗಿತ್ತು. ಇವೆಲ್ಲ ಸಾಮಾನ್ಯ ಪ್ರಮಾಣದ ಭೂಕಂಪನ.   ಉತ್ತರಕನ್ನಡ (Uttarakannada) ಪಶ್ಚಿಮ ಘಟ್ಟ ಭಾಗದಲ್ಲಿ ಮೊದಲ ಸಲ ಭೂಕಂಪನ ಆಗಿದೆ. ಹಾಗಾಗಿ ಅದನ್ನು ವಿಸ್ತ್ರತವಾಗಿ ಅಧ್ಯಯನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಪಾಯದಲ್ಲಿ ಉತ್ತರಕನ್ನಡ :  ಕೆಲ ವರ್ಷಗಳಿಂದ ರಸ್ತೆಗಾಗಿ ವ್ಯಾಪಕವಾಗಿ ಗುಡ್ಡಗಳನ್ನು ಕೊರೆಯಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಹಾಗೂ ಈ ಬಾರೀ  ಅಧಿಕ ಪ್ರಮಾಣದಲ್ಲಿ ಸುರಿದ ಮಳೆಯ ಕಾರಣದಿಂದ ಭೂಕಂಪನ ಆಗಿದೆ ಎಂದು ವಿಜ್ಞಾನಿಗಳ ಅಂದಾಜಿಸಿದ್ದಾರೆ.

ಇದನ್ನು ಓದಿ : ರಾಜ್ಯದ ವಿವಿಧಡೆ ಮಳೆಯ ರುದ್ರ ನರ್ತನ

ಕಾಂಗ್ರೆಸ್ ಮುಖಂಡರ ಮಾರಾಮಾರಿ

ಪೆಂಗಲ್ ಚಂಡಮಾರುತ ಅಬ್ಬರ

ಬಾಲಕನ ಜೀವ ತೆಗೆದ ಬಲೂನ್