ದಾಂಡೇಲಿ :  ಕಾರೊಂದು ಹಿಮ್ಮುಖವಾಗಿ ವೇಗವಾಗಿ ಚಲಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ   ದಾಂಡೇಲಿ ನಗರದ ಸಂಡೆ ಮಾರ್ಕೆಟ್ ಮುಂಭಾಗದ ಜೆ.ಎನ್ ರಸ್ತೆಯಲ್ಲಿ  ಬುಧವಾರ ರಾತ್ರಿ ಸಂಭವಿಸಿದೆ.

ಕೆಎ: 25, ಎಂ.ಇ 1237 ಸಂಖ್ಯೆಯ ಕಾರೊಂದು ಸಂಡೆ ಮಾರ್ಕೆಟ್ ಮುಂಭಾಗದ ಜೆ.ಎನ್. ರಸ್ತೆಯಲ್ಲಿ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರಾಗಿದ್ದು ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿದ್ದ ನಗರದ ಪಟೇಲ್ ನಗರದ ನಿವಾಸಿಗಳಾದ ಎಲಿಜಬೆತ್ ಅಬ್ರಾಹಂ ಕಲ್ವಕುರಿ ಮತ್ತು ಅವರ ಪುತ್ರ ಯೇಸುದಾಸ್ ಅಬ್ರಾಹಂ ಕಲ್ವಕುರಿ  ಗಂಭೀರ ಗಾಯಗೊಂದವರು.

ಗಾಯಗೊಂಡ ಇಬ್ಬರನ್ನು  ಸಾರ್ವಜನಿಕರು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ದಾಂಡೇಲಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿದ್ದಾರೆ.