ಬೆಂಗಳೂರು(BANGLORE) : ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿರುವ ಬೆನ್ನಲ್ಲೇ ಕಾಂಗ್ರೆಸ್ ಪಾಳೆಯದಲ್ಲಿ ಈಗಲೇ ಸಿಎಂ ಆಗುವ ಲೆಕ್ಕಾಚಾರ ಆರಂಭವಾಗಿದೆ .

ಕಾಂಗ್ರೆಸ್ ನ ಹಿರಿಯ ನಾಯಕರು ಮುಖ್ಯಮಂತ್ರಿ ಗಾದಿಗೇರಲು  ಒಳಗೊಳಗೆ ಸಿದ್ಧತೆ  ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ತವರು ನೆಲ ಮೈಸೂರಿನಲ್ಲಿ ಹಿರಿಯ ನಾಯಕ ಆರ್ ವಿ ದೇಶಪಾಂಡೆ(R V DESHAPANDE) ಸಿಎಂ ಆಸೆ ವ್ಯಕ್ತಪಡಿಸಿದ್ದು ಉಳಿದ ನಾಯಕರನ್ನ ಅಲರ್ಟ್ ಮಾಡಿದೆ. ಹಿರಿಯ ನಾಯಕರಾಗಿರುವ ಗೃಹ ಸಚಿವರಾದ(HOME MINISTER) ಜಿ ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(JARAKIHOLI) ಹೀಗೆ ಹಲವು ನಾಯಕರ ಆಸೆ ಸಿಎಂ ಗಾದಿ ಮೇಲಿದೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ(KHARGE) ಇದರಲ್ಲಿ ಪ್ರಧಾನರಾಗಿರುವವರು.

ಈ ನಡುವೆ ಸಿಎಂ ಸಿದ್ದರಾಮಯ್ಯ ಅವರೇ ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಮಾಡೋದು ಶಾಸಕರು, ಹೈಕಮಾಂಡ್ ಎಂದು ನಗೆ ಬೀರಿದ್ದಾರೆ. ಕಾರವಾರದಲ್ಲಿ ದೇಶಪಾಂಡೆ ಅವರ ಸಿಎಂ ಆಸೆ ಬಗ್ಗೆ ಸಚಿವ ಮಂಕಾಳ್ ವೈದ್ಯ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರು ದೇಶಪಾಂಡೆ ಅವರಿಗೆ ಸಿಎಂ ಆಗು ಎಂದು ಹೇಳಿರುವುದು ಇದೇ ಕಾರಣಕ್ಕಿರಬಹುದು.

ಮುಡಾ ಆರೋಪ ಬಂದಾಗ ಸಿದ್ದರಾಮಯ್ಯಗೆ  ಹೈಕಮಾಂಡ್‌ ಮತ್ತು ಶಾಸಕರು ಬೆಂಬಲ ಲಭಿಸಿದೆ. ಆದರೆ ಅವರನ್ನ ಗಾದಿಯಿಂದ ಇಳಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎಂಬ ವಿಚಾರ ಸ್ವತಃ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಒಂದು ವೇಳೆ ಅಂತ ಸಾಧ್ಯತೆ ಬಂದಾಗ ಸಿದ್ದರಾಮಯ್ಯ ಅವರೇ ಇಂತವರ ಹೆಸರನ್ನು ಹೈಕಮಾಂಡ್ ಗೆ ಸೂಚಿಸಬಹುದು.

ಉಪ ಮುಖ್ಯ ಮಂತ್ರಿಯಾಗಿರುವ ಡಿ ಕೆ ಶಿವಕುಮಾರ್ ಅವರಿಗೂ ಸಿಎಂ ಆಗುವ ಆಸೆ ಹೆಚ್ಚಾಗಿದೆ. ಆದರೆ ಮುಡಾ ದಂತಹ  ಸಂದರ್ಭದಲ್ಲಿ ತಮ್ಮ ಆಸೆ ತೋರಿಸೋದು ಸರಿಯಲ್ಲ ಎಂಬ ವಿಚಾರ ಅವರ ಮನದಲ್ಲಿದೆ. ಆದರೆ ಬಹುತೇಕ ಶಾಸಕರ ಬಲವನ್ನು ಡಿ ಕೆ ಶಿವಕುಮಾರ್(D K SHIVAKUMAR) ಹೊಂದಿದ್ದಾರೆ. ಒಂದು ವೇಳೆ ಅಂಥ ಸಂದರ್ಭ ಬಂದಾಗ ತಮ್ಮ ಅಸ್ತ್ರ ಪ್ರಯೋಗಿಸಲು ಬಂಡೆ ಖಂಡಿತ ಮುಂದಾಗುತ್ತಾರೆ.

ಏನೇ ಇರಲಿ, ಸಿದ್ದರಾಮಯ್ಯ ಕೆಳಗಿಳಿದರೆ ನಂಗೊಂದು ಚಾನ್ಸ್ ಕೊಡಿ ಎಂದು ಕೆಲ ಹಿರಿಯ ನಾಯಕರು ಹೈಕಮಾಂಡ್ ಬಾಗಿಲು ಮುಂದೆ ನಿಂತಿದ್ದಾರೆ.

ಈ ನಡುವೆ ಕೆಪಿಸಿಸಿ (KPCC) ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು, ಮುಖ್ಯಮಂತ್ರಿ ಹುದ್ದೆಗೇರಲು ತಮ್ಮ ಇಂಗಿತ ವ್ಯಕ್ತಪಡಿಸಿದ್ದೇನು ಹೌದು. ಆದರೆ, ಅವರು ಬ್ರಾಹ್ಮಣ ಸಮುದಾಯದವರಾಗಿದ್ದಾರೆ. ಅಲ್ಲದೇ ಅವರಿಗೆ ಸಮುದಾಯದ ನಿರ್ಧಿಷ್ಟ ಶಾಸಕರ ಬೆಂಬಲ ಇಲ್ಲದಿರುವುದು ದೇಶಪಾಂಡೆ ಅವರಿಗೂ ಗೊತ್ತಿದೆ. ಕೊನೆಯದಾಗಿ ಒಂದು ಆಸೆ ತೋರಿಸಿದ್ದಾರೆ. ಹೈಕಮಾಂಡ್ ಏನು ಮಾಡುತ್ತದೆ ಕಾದು ನೋಡಬೇಕು.

ಇದನ್ನು ಓದಿ : ಮೀನು ಹಿಡಿಯಲು ಹೋಗಿ ಸಾವು

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವಾಹನ ಡಿಕ್ಕಿ

ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಕೊಲೆ