ಕಾರವಾರ(KARWAR) : ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆ ತಡೆಯಲು ವಿಫಲರಾಗಿರುವ ಪಿಎಸ್ಐ ಅವರನ್ನ ಅಮಾನತ್ ಮಾಡಲಾಗಿದೆ.

ಮುರ್ಡೇಶ್ವರ ಪೊಲೀಸ್ ಠಾಣೆ(MURDESHWAR POLICE STATION) ಪಿಎಸ್ಐ ಮಂಜುನಾಥ್ (PSI MANJUNATH)ಅಮಾನತ್ ಆಗಿರುವ ಅಧಿಕಾರಿ. ಬಸ್ತಿಮಕ್ಕಿಯ ಐಲ್ಯಾಂಡ್ ಹೋಟೆಲ್ (HIGHLAND HOTEL)ನಲ್ಲಿ  ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಪಿಎಸ್ಐ  ತಡೆಗಟ್ಟುವಲ್ಲಿ ವಿಫಲರಾಗಿ ಕರ್ತವದಲ್ಲಿ ಘೋರ ಅಶಿಸ್ತು ಮತ್ತು ದುರ್ನಡತೆ ಹಾಗು ಬೇಜವಾಬ್ದಾರಿತನ ತೋರಿಸಿದ್ದಾರೆ. ಹೀಗಾಗಿ ಅವರ ಮೇಲೆ ಇಲಾಖೆ  ಕರ್ತವ್ಯದಿಂದ ಅಮಾನತಗೊಳಿಸಿದೆ.

ಮುರ್ಡೇಶ್ವರದ ಐಲ್ಯಾಂಡ್  ಹೋಟೆಲ್‌ನಲ್ಲಿ ಕಾನೂನು ಬಾಹಿರ ಕೃತ್ಯ ನಡೆಸಲಾಗುತ್ತಿದೆ ಎಂಬ ಮೇರೆಗೆ ಭಾನುವಾರ ರಾತ್ರಿ ಸಿಇಎನ್‌ ವಿಭಾಗದ ಡಿವೈಎಸ್ಪಿ ಅಶ್ವಿನಿ(DYSP ASHWINI) ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಹೋಟೆಲ್ ನಲ್ಲಿದ್ದ  ಯುವತಿಯರು ತಮ್ಮ ಬ್ಯಾಗ್, ಬಟ್ಟೆ ಇತರ ವಸ್ತುಗಳನ್ನು ಬಿಟ್ಟು ಎಸ್ಕೇಪ್ ಆಗಿದ್ದರು.  ವೇಳೆ ಹೋಟೆಲ್ ಸಿಬ್ಬಂದಿ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ ನಾರಾಯಣ ಕರ್ತವ್ಯ ಲೋಪದ ಮೇಲೆ ಕ್ರಮ ಕೈಗೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ಹೋಟೆಲ್ ಮೇಲೆ ದಾಳಿ

ದೇಶಪಾಂಡೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ