ಭಟ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಇಬ್ಬರು ಅನಾರೋಗ್ಯ ಪೀಡಿತರಿಗೆ ವೀಲ್ಚೇರ್ ಹಾಗೂ ವಾಟರ್ ಬೆಡ್ ನೀಡಲಾಯಿತು.
ಪೂಜ್ಯರಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಉಚಿತ ವಾಗಿ ನೀಡಿರುವ ವೀಲ್ಚೇರ್ ಹಾಗೂ ವಾಟರ್ ಬೆಡ್ ನ್ನು ಅಪಘಾತದಿಂದಾಗಿ ಓಡಾಡಲು ಸಾಧ್ಯವಾಗದ ಹೆಬಳೆ ವಲಯದ ಗಾಂಧಿನಗರ ಕಾರ್ಯಕ್ಷೇತ್ರದ ತಿಮ್ಮಪ್ಪ ಗೊಂಡ ಹಾಗೂ ಗೋವಿಂದ ಇವರಿಗೆ ನೀಡಲಾಯಿತು.
ತಿಮ್ಮಪ್ಪ ಗೊಂಡ ಅವರು ಕಳೆದ ಒಂದು ವರ್ಷದ ಹಿಂದೆ ತೆಂಗಿನ ಮರ ಏರಿ ಕಾಯಿ ತೆಗೆಯುವ ವೇಳೆ ಆಯಾ ತಪ್ಪಿ ಕೆಳಕ್ಕೆ ಬಿದ್ದಿದ್ದರು. ಅವರ ಕೈ ಕಾಲು ಮುರಿದು ಸ್ಥಿತಿ ಚಿಂತಾಜನಕವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಇನ್ನೂ ಗೋವಿಂದ ಅವರು ಕೂಡ ಮನೆಯ ಅಂಗಳದಲ್ಲಿ ಬಿದ್ದು ನಡೆಯಲು ಆಗದೇ ಹಾಸಿಗೆ ಮೇಲಿದ್ದರು. ಕಳೆದ ಆರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಪರಿಸ್ಥಿತಿ ನೋಡಿ ಈ ಸಹಾಯ ಮಾಡಲಾಗಿದೆ.
ಭಟ್ಕಳ ತಾಲೂಕಿನ ಯೋಜನಾಧಿಕಾರಿಗಳಾದ ಗಣೇಶ್ ನಾಯ್ಕ ಈ ಪರಿಕರಗಳನ್ನ ವಿತರಿಸಿದರು. ವಲಯದ ಮೇಲ್ವಿಚಾರಕರಾದ ಶ್ರೀಮತಿ ಸುಶೀಲ, ನವಜೀವನ ಸಮಿತಿ ಸದಸ್ಯರಾದ ಮಾದೇವ ಗೊಂಡ, ಸೇವಾ ಪ್ರತಿನಿಧಿ ಶ್ರೀಮತಿ ಮುಕ್ತಾ ಉಪಸ್ಥಿತರಿದ್ದರು.