ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ರಾಷ್ಟ್ರ ರಾಜಧಾನಿಯಲ್ಲಿ(Capital of Nation) ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ (Central Education Minister Dharmendra Pradhan resignes)ನೀಡಿದ್ದಾರೆ.

ನೀಟ್(Neet) ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಕ್ಕಿದೆ. ನಾವು ಸಾಧಿಸಿದ್ದೇವೆ ಎಂದು ಕಾಕ್ರೋಚ್ ಜನತಾ ಪಾರ್ಟಿ(Cockrocha Janata Party) ಸಂಸ್ಥಾಪಕ ಅಭಿಜಿತ್ ದೀಪೈ ಹೇಳಿದ್ದಾರೆ.

ಜಂತರ್-ಮಂತರ್ ನಲ್ಲಿ(Janta-Mantar) ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅಭಿಜಿತ್ ದೀಪ್ಕೆ(Abhijeet Deepke), ಒಂದು ಬೇಡಿಕೆ ಈಡೇರಿದೆ. ನಮ್ಮ ಇನ್ನೂ ಎರಡು ಬೇಡಿಕೆಗಳಿವೆ. ಸಂತ್ರಸ್ತ ವಿದ್ಯಾರ್ಥಿ ಕುಟುಂಬಗಳಿಗೆ 1 ಕೋಟಿ ಪರಿಹಾರ ನೀಡಬೇಕು. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೇಂದ್ರದ ಈ ಸರ್ಕಾರದಲ್ಲಿ ರಾಜೀನಾಮೆ ಎಂಬುದು ಇಲ್ಲ, ಸಚಿವರ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗುತಿತ್ತು. ಆದರೆ ಎಲ್ಲರ ಒಗ್ಗಟ್ಟಿನ ಹೋರಾಟದಿಂದ ನಾವು ಅದನ್ನು ಸಾಧಿಸಿದ್ದೇವೆ. ಈ ಜಯದ ಯಶಸ್ಸು ಎಲ್ಲಾ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪತ್ರದಲ್ಲೇನಿದೆ :
ಮೇ 3, 2026 ರಂದು ನಡೆದ NEET-UG ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದವು. ಕೇಂದ್ರ ಸರ್ಕಾರ(Central Government) ತಕ್ಷಣ ಇದನ್ನು ಗಂಭೀರವಾಗಿ ಪರಿಗಣಿಸಿ CBI ತನಿಖೆಗೆ ಆದೇಶಿಸಿತು. ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆಯ ದಿನಾಂಕವನ್ನೂ ಘೋಷಿಸಲಾಯಿತು. ಮುಂದಿನ ವರ್ಷದಿಂದ ಪರೀಕ್ಷೆಯನ್ನು CBT ಮೋಡ್‌ನಲ್ಲಿ ನಡೆಸಲು ನಿರ್ಧರಿಸಲಾಯಿತು.

“Whole of government approach” , ಸರ್ಕಾರ ಮತ್ತು ಜಿಲ್ಲಾಡಳಿತದ ಸಹಕಾರದಿಂದ ಜೂನ್ 21, 2026 ರಂದು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಜುಲೈ 16 ರಂದು ಫಲಿತಾಂಶ ಪ್ರಕಟವಾಯಿತು. ಬಡ ಹಿನ್ನೆಲೆಯಿಂದ ಬಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

*ರಾಜೀನಾಮೆಗೆ ಕಾರಣ:* “ಕಳೆದ 10 ದಿನಗಳ ಬೆಳವಣಿಗೆಗಳು ನನ್ನನ್ನು ದುಃಖಿತಗೊಳಿಸಿವೆ. ಇದು ನನ್ನ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ. ರಾಷ್ಟ್ರ ವಿರೋಧಿ ಶಕ್ತಿಗಳು ಈ ಪರಿಸ್ಥಿತಿಯ ಲಾಭ ಪಡೆಯಬಾರದು. ದೇಶದ ಏಕತೆ ಉಳಿಯಬೇಕು. ಯಾವುದೇ ವಿದ್ಯಾರ್ಥಿಯ ಭವಿಷ್ಯ ಕಾನೂನು ಚಕ್ರವ್ಯೂಹದಲ್ಲಿ ಸಿಲುಕಬಾರದು” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

“ನಮ್ಮ ಮಕ್ಕಳು ಓದಿನಲ್ಲಿ ಸಮಯ ಕಳೆಯಬೇಕು, ವೃತ್ತಿ ನಿರ್ಮಾಣದ ಮೇಲೆ ಗಮನ ಹರಿಸಬೇಕು” ಎಂಬ ಕಾರಣಕ್ಕೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

“ಕಳೆದ 4 ದಶಕಗಳಿಂದ ವಿದ್ಯಾರ್ಥಿ, ಶಿಕ್ಷಕ ಮತ್ತು ಶಿಕ್ಷಣ ಸುಧಾರಣೆಗೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರಸೇವೆ(Nation Service) ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞ” ಎಂದು ಪ್ರಧಾನ್‌ ಹೇಳಿದ್ದಾರೆ.

“ಭವಿಷ್ಯದಲ್ಲೂ ಭಾರತ ಮಾತೆ, ಒಡಿಶಾ ಜನತೆ ಮತ್ತು ದೇಶದ ಯುವಕರ ಆಕಾಂಕ್ಷೆಗಳ ಈಡೇರಿಕೆಗೆ ಶ್ರಮಿಸುತ್ತೇನೆ” ಎಂದು ಧರ್ಮೆಂದ್ರ ತಿಳಿಸಿದ್ದಾರೆ.