ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ಮುಂಗಾರು ಪೂರ್ವ ಭಾರೀ ಗಾಳಿ, ಮಳೆಯಿಂದ ತುಂಡಾಗಿ ಕಾಳಿ ನದಿಗೆ(Kali River) ಬಿದ್ದಿದ್ದ 11 ಕೆ.ವಿ. ಪ್ರಾಜೆಕ್ಟ್ 1 ಮತ್ತು 2 ಹಾಗೂ ಕಾಳಿ ಮಾರ್ಗದ ವಿದ್ಯುತ್ ಲೈನ್(Electricity) ದುರಸ್ತಿ ಮಾಡಿದ ಘಟನೆ ನಡೆದಿದೆ.
ಮಾ. 25 ರಂದು ಸುರಿದ ಗಾಳಿ-ಮಳೆಗೆ ಕಾಳಿ ನದಿಯ(Kali River) ಕ್ರಾಸಿಂಗ್ ಲೈನ್ ಮೇಲೆ ಬೃಹತ್ ಗಾತ್ರದ ಮಾವಿನ ಮರ(Mango Tree) ಬಿದ್ದಿತ್ತು. ಪರಿಣಾಮ ವಿದ್ಯುತ್ ಲೈನ್ ತುಂಡಾಗಿ, ನದಿ ನೀರಿನಲ್ಲಿ ಬಿದ್ದಿತ್ತು. ಇದರಿಂದ ಬೊಮ್ಮನಳ್ಳಿ, ಕೇದಾಳ, ಕುಳಗಿ ಹಾಗೂ ಅಂಬಿಕಾನಗರ(Ambikanagara) ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪುರುಷೋತ್ತಮ ಡಿ. ಮಲ್ಯಾ ಅವರ ಮಾರ್ಗದರ್ಶನ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದೀಪಕ್ ಎನ್. ನಾಯಕ್ ಅವರ ಮೇಲ್ವಿಚಾರಣೆ, ಶಾಖಾಧಿಕಾರಿ (ನಗರ) ಉದಯಕುಮಾರ್ ಎಚ್., ಶಾಖಾಧಿಕಾರಿ (ಗ್ರಾಮೀಣ ) ರಾಹುಲ್ ಭೂತೆ ಇವರ ನೇತೃತ್ವದಲ್ಲಿ ಗುತ್ತಿಗೆದಾರ ಖುಷಿ ಇಲೆಕ್ಟ್ರಿಕಲ್‌ನ ಸಿಬ್ಬಂದಿ , ದಾಂಡೇಲಿ ಉಪ-ವಿಭಾಗದ ನಗರ ಹಾಗೂ ಗ್ರಾಮೀಣ ಶಾಖೆಯ ಸಿಬ್ಬಂದಿ, ಕೆಪಿಟಿಸಿಎಲ್ ಸಿಬ್ಬಂದಿ ನಿರಂತರವಾಗಿ ಎರಡು ದಿನಗಳವರೆಗೆ ನದಿ ನೀರಿನ ನಡುವೆ ದುರಸ್ತಿ ಕಾರ್ಯ ಕೈಗೊಂಡು, ಮಾ. 27ರ ಸಂಜೆ 7.30ಕ್ಕೆ ವಿದ್ಯುತ್ ಪೂರೈಕೆ ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದುರಸ್ತಿ ಕಾರ್ಯಕ್ಕೆ ರೀವರ್ ರ್ಯಾಪ್ಟಿಂಗ್ (River Rafting) ಬೋಟ್ ನೀಡಿದ ಸಂತೋಷ ಹೋಟೆಲ್ ಮಾಲೀಕ ವಿಷ್ಣುಮೂರ್ತಿ ರಾವ್ , ಬೋಟ್ ಚಾಲಕ ಉದೇಶ್, ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಿಬ್ಬಂದಿಗಳು ಸಹಕರಿಸಿದರು. ಹೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್ ದೀಪಕ್ ಎನ್. ನಾಯಕ ಧನ್ಯವಾದ ತಿಳಿಸಿದ್ದಾರೆ.
ಇದನ್ನು ಓದಿ : ಬಡವಳಿಗೆ ಪರಿಹಾರ ನೀಡಲು ನಿರ್ಲಕ್ಷ್ಯ. ರೊಚ್ಚಿಗೆದ್ದ ಆರ್ ವಿ ದೇಶಪಾಂಡೆ.