ನವದೆಹಲಿ(NEWDELHI) : ಶಿರೂರು ಗುಡ್ಡ ಕುಸಿತದಲ್ಲಿ(SHIRURU LANDSLIDE) ಮೃತಪಟ್ಟವರ ಕುಟುಂಬಕ್ಕೆ ಕೋಟಿ ರೂಪಾಯಿ ಹಣ ದೊರಕಿಸಿಕೊಡಬೇಕೆಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷ ಪ್ರಣಾವಾನಂದ ಸ್ವಾಮಿ(PRANAVANANDA SWAMI) ಒತ್ತಾಯಿಸಿದ್ದಾರೆ.
ಮಂಗಳವಾರ ದುರಂತದಲ್ಲಿ ನೊಂದ ಕುಟುಂಬ ಸದಸ್ಯರೊಂದಿಗೆ ದೆಹಲಿಗೆ ತೆರಳಿ ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(KAGERI), ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ(KOTA SRINIVAS POOJARI) ಹಾಗೂ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ(B Y RAGHAVENDRA) ಅವರನ್ನ ಭೇಟಿ ಮಾಡಿ ಪ್ರತಿ ಕುಟುಂಬಕ್ಕೂ ಐಆರ್‌ಬಿ (IRB) ಕಂಪನಿಯಿಂದ ಒಂದು ಕೋಟಿ ರೂಪಾಯಿ ಹಣ ಪರಿಹಾರ ಕೊಡಿಸಬೇಕೆಂದು ಅಗ್ರಹಿಸಿದರು.
ಅಲ್ಲದೇ ಕಂಪನಿಯಲ್ಲಿ ಪ್ರತಿ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗವನ್ನು ಕೊಡಿಸಬೇಕು. ಗಂಗಾವಳಿ (GANGAVALI) ಹಾಗೂ ಶಿರೂರು ಗ್ರಾಮದಲ್ಲಿ ಸಂಪೂರ್ಣ ಮನೆ ನಾಶವಾದ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಹಣ ನೀಡಬೇಕಾಗಿ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದರು.
ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು. ಎನ್ ಹೆಚ್ಎಐ(NHAI) ಮತ್ತು ಐಆರ್ಬಿ ಕಂಪನಿಯವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಐಆರ್ಬಿ ಕಂಪೆನಿ ನಡೆಸಿದ ಅವೈಜ್ಞಾನಿಕ(UNSCIENTIFIC) ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ಈ ಸಂದರ್ಭದಲ್ಲಿ ಸ್ವಾಮೀಜಿ ಸಂಸದರಿಗೆ ನೀಡಿದರು.
ಕುಟುಂಬ ಸದಸ್ಯರೊಂದಿಗೆ ಪ್ರತಿಯೊಬ್ಬರಿಗೂ ಮನವಿ ಸಲ್ಲಿಸಿದರು. ಎರಡು ದಿನಗಳ ಕಾಲ ಎನ್ಎಚ್ಎಐ ಚೇರ್ಮನ್ (CHAIRMAN) ಮತ್ತು ಸಂಬಂಧಪಟ್ಟ ಸಚಿವರನ್ನ, ಸರ್ವೋಚ್ಚ ನ್ಯಾಯಾಲಯದ(SUPREME COURT) ನ್ಯಾಯವಾದಿಗಳನ್ನು ಭೇಟಿ ಮಾಡಿ ಅವೈಜ್ಞಾನಿಕ ಕಾಮಗಾರಿಯ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಕಂಪನಿ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಕುಟುಂಬದ ಸದಸ್ಯರೊಂದಿಗೆ ದೆಹಲಿಯ ಜಂತರ್ ಮಂತರ್(JANTHAR MANTHAR) ನಲ್ಲಿ ಉಪವಾಸ ಕುಳಿತುಕೊಳ್ಳಲು ನಿರ್ಣಯಿಸಿದ್ದೇವೆಂದು ಪ್ರಣಾವಾನಂದ ಸ್ವಾಮಿ ಹೇಳಿದ್ದಾರೆ.