ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ಬಾಡಿಗೆ ಮನೆಯೊಂದರಲ್ಲಿ 500 ರೂ ಮುಖಬೆಲೆಯ ರಾಶಿ ನಕಲಿ ನೋಟುಗಳು(Fake Note) ಪತ್ತೆಯಾದ ಘಟನೆ ಗಾಂಧಿನಗರದಲ್ಲಿ (Gandhinagar) ನಡೆದಿದೆ.
ಖಚಿತ ಮಾಹಿತಿಯಡಿ ನಗರ ಠಾಣೆಯ ಪೊಲೀಸರು(Town Station Police) ದಾಳಿ ನಡೆಸಿ ನಕಲಿ ನೋಟುಗಳು ಹಾಗೂ ಹಣ ಏಣಿಕೆ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ನೂರಜಾನ್ ಜುಂಜುವಾಡ್ಕರ ಎಂಬುವವರಿಗೆ ಸೇರಿದ ಗಾಂಧಿನಗರದಲ್ಲಿರುವ ಮನೆಯಲ್ಲಿ ಗೋವಾ ಮೂಲದ ಅರ್ಷದ್ ಖಾನ್ ಎಂಬಾತ ಬಾಡಿಗೆದಾರನಾಗಿ ವಾಸ್ತವ್ಯವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿದ ಮನೆಯ ಮಾಲೀಕ ಮನೆ ಪರಿಶೀಲಿಸುತ್ತಿದ್ದಾಗ ಮನೆಯ ಹಿಂಬದಿಯ ಬಾಗಿಲ ಚೀಲಕ ಸರಿ ಹಾಕದಿರುವುದು ಗೊತ್ತಾಗಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ನಗರ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿದರು. ಮನೆಯ ಒಳಗೆ 500 ರೂ ಮುಖಬೆಲೆಯ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ(Reverse bank of india) ಎಂಬ ಬರಹ ಇರುವ ಮತ್ತು ಗವರ್ನರ್(Governer) ಸಹಿ ಇಲ್ಲದೆ ಇರುವ ನೋಟಿಗೆ ಸಂಖ್ಯೆಯಿರುವ ಜಾಗದಲ್ಲಿ ಸೊನ್ನೆಯಷ್ಟೇ ನಮೂದಿಸಿರುವ ಮತ್ತು ಮೂವಿ ಶೂಟಿಂಗ್ ಪರ್ಪಸ್ ಓನ್ಲಿ(Movie Shooting Purpose Only) ಎಂದು ಬರೆದಿರುವ ಶೈನಿಂಗ್ ಪೇಪರಿನಲ್ಲಿ ಮುದ್ರಿತ 500 ಮುಖಬೆಲೆಯ ನಕಲಿ ಐವತ್ತು ನೋಟುಗಳ ಪತ್ತೆಯಾಗಿದೆ. ಅಂದಾಜು 14 ಕೋಟಿ ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಕಲಿ ನೋಟಿಗೆ ಸಂಬಂಧಪಟ್ಟ ಮನೆಯಲ್ಲಿ ವಾಸವಾಗಿದ್ದ ಅರ್ಷದ್ ಖಾನ್ ನನ್ನ ವಶಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ದಾಂಡೇಲಿ ನಗರ ಠಾಣೆ (Dandeli Town Police) ಪೊಲೀಸರು ಕ್ರಮವನ್ನು ಕೈಗೊಂಡಿದ್ದಾರೆ.
ಮನೆಯಲ್ಲಿ ಬಾರೀ ಪ್ರಮಾಣದ ನೋಟು ಪತ್ತೆಯಾದ ವಿಷಯ ತಿಳಿದ ದಾಂಡೇಲಿ ಜನತೆ ಒಂದು ಕ್ಷಣ ಹೌಹಾರಿದರು. ಆದರೆ ಈ ಹಣದ ಕಂತೆ ಯಾವ ಉದ್ದೇಶಕ್ಕಾಗಿ ಇದನ್ನು ಬಳಕೆ ಮಾಡಲು ಇಡಲಾಗಿತ್ತು, ಇದರ ಹಿಂದಿರುವ ಮರ್ಮವೇನು ಎನ್ನುವುದರ ಬಗ್ಗೆ ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.
ಇದನ್ನು ಓದಿ : ಪಿಯುಸಿ ಫಲಿತಾಂಶ ಪ್ರಕಟ. ಬಾಲಕಿಯರ ಕಮಾಲ್.