ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ಹುಲ್ಲಿನ ಬಣಿವೆಗೆ ಆಕಸ್ಮಿಕ ಬೆಂಕಿ (Fire) ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ತಾಲ್ಲೂಕಿನ ಬಡಕಾನಶಿರಡಾ ಗ್ರಾ.ಪಂ ವ್ಯಾಪ್ತಿಯ ಹಾರ್ನೋಡಾ ಗ್ರಾಮದಲ್ಲಿ (Harnoda Village) ಸಂಭವಿಸಿದೆ.
ಹಾರ್ನೋಡಾ ಗ್ರಾಮದ ನಿವಾಸಿ ಬಾಬು ಲಕ್ಕು ಪಟಕಾರೆ ಎಂಬವರಿಗೆ ಸೇರಿದ ಹುಲ್ಲಿನ (Gross) ಬಣಿವೆಯಾಗಿದೆ. ತೀರ ಬಡವರಾದ ಬಾಬು ಪಟಕಾರೆ ತಮ್ಮ ದನಕರುಗಳಿಗಾಗಿ(Cattles) ರಾಮನಗರದಿಂದ ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸಿ ಹುಲ್ಲನ್ನು ಖರೀದಿಸಿದ್ದರು. ಇದೀಗ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮವಾಗಿ ಹುಲ್ಲು ಸಂಪೂರ್ಣ ಭಸ್ಮವಾಗಿದೆ.
ಘಟನೆ ನಡೆದ ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡ ಬೇಕಾಯಿತು. ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ(West Coast Paper Mill) ಅಗ್ನಿಶಾಮಕ ದಳವು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಮುಂದಾಯಿತು. ಸುಮಾರು ಎರಡು ತಾಸುಗಳ ಕಾಲ ಬೆಂಕಿ ಹುಲ್ಲಿನ ಬಣವೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಈ ಅಗ್ನಿ ಅವಘಡದಿಂದ ಸುಮಾರು ಒಂದುವರೆ ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯವರು ಸೂಕ್ತ ಪರಿಹಾರಕ್ಕಾಗಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ಇದನ್ನು ಓದಿ : ರೈಲಿಗೆ ಸಿಲುಕಿ ಎಎಸ್ಐ ಪುತ್ರಿ ದುರಂತ ಅಂತ್ಯ
ಮಲ್ಪೆಯಲ್ಲಿ ಮೀನುಗಾರರ ಬೃಹತ್ ಪ್ರತಿಭಟನೆ. ಅಮಾಯಕ ಮಹಿಳೆಯರ ಬಿಡುಗಡೆಗೆ ಆಗ್ರಹ.
	
						
							
			
			
			
			
