ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಶಿರಸಿ (Sirsi): ತಾಲೂಕಿನ ಮಂಜಳ್ಳಿ ಕ್ರಾಸ್ ಬಳಿ ಬಾರೀ ಅಗ್ನಿ ಅನಾಹುತ(Fire Incident) ಸಂಭವಿಸಿದೆ. ಗುಜರಿ ಶೇಖರಣ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ.
ಶನಿವಾರ ಮಧ್ಯೆರಾತ್ರಿ ಈ ಘಟನೆ ನಡೆದಿದ್ದು, ಫಾವಿದ್ ಶೇಖ್ ಎಂಬುವವರಿಗೆ ಸೇರಿದ ಗುಜರಿ ಶೇಖರಣ ಘಟಕ ಎಂದು ಹೇಳಲಾಗಿದೆ. ಘಟನೆಯಲ್ಲಿ ಸಿಲೆಂಡರ್ ಸ್ಪೋಟಗೊಂಡು ಬೋಲೆರೊ ಪಿಕಪ್ ವಾಹನ, ಪ್ರೆಸ್ಸಿಂಗ್ ಮಷಿನ್ ಸೇರಿದಂತೆ ಇತರ ಸಾಮಗ್ರಿಗಳಿಗೆ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಹತ್ತಿದ ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂ ಹಾನಿ ಆಗಿರುವ ಸಾಧ್ಯತೆ ಇದೆ.
ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಲಕ್ಷ್ಮಣ ಪಟಗಾರ ಸಿಬ್ಬಂದಿಗಳಾದ ಧನಂಜಯ, ಪ್ರವೀಣ, ರಮೇಶ, ದುಂಡಪ್ಪ, ಜುಬೇರ್, ಮಂಜುನಾಥ ಹಾಗು ಗ್ರಾಮಸ್ಥರು ಸಹಕರಿಸಿದ್ದರು.
ಇದನ್ನು ಓದಿ : ಇನ್ಮುಂದೆ ಭಾರತದ ಮೇಲೆ ಉಗ್ರ ಕೃತ್ಯವನ್ನ ಯುದ್ಧ ಕೃತ್ಯವೆಂದು ಪರಿಗಣನೆ. ಉಭಯ ದೇಶಗಳಿಂದ ಕದನ ವಿರಾಮಕ್ಕೆ ಒಪ್ಪಿಗೆ ಎಂದ ಅಮೇರಿಕಾ ಅಧ್ಯಕ್ಷ.
	
						
							
			
			
			
			
