ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಮಧ್ಯ ಹಿಂದೂ ಮಹಾಸಾಗರದ ಡಿಯಾಗೋ ಗಾರ್ಸಿಯಾ ದ್ವೀಪದ ಬಳಿ ಬ್ರಿಟಿಷ್ ನೌಕಾಪಡೆ ತಮಿಳುನಾಡಿನ ತೋತೊರ್ ಗ್ರಾಮದ ಹತ್ತು ಮೀನುಗಾರರನ್ನು  ಬಂಧಿಸಿದೆ.

  ಶ್ರೀಲಂಕಾ(Shrilanka) ನೌಕಾಪಡೆಯು ನಿರಂತರವಾಗಿ ಭಾರತೀಯ ಮೀನುಗಾರರನ್ನು ಬಂಧಿಸುತ್ತಿರುವ ಮಧ್ಯೆ ತಮಿಳುನಾಡಿನ ಕರಾವಳಿ ಸಮುದಾಯವು(Karavali Community) ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ. ಸೋಮವಾರ ಮುಂಜಾನೆ  ಮೀನು ಹಿಡಿಯಲು ತೆರಳಿದ್ದ ಮೀನುಗಾರರನ್ನು ಬ್ರಿಟಿಷ್ ನೌಕಾಪಡೆ ವಶಕ್ಕೆ ತೆಗೆದುಕೊಂಡಿದೆ ಎಂದು ತಮಿಳುನಾಡು ಮೀನುಗಾರಿಕೆ ಇಲಾಖೆಯ(Tamilunadu Fisharies Department) ಅಧಿಕಾರಿಗಳು  ಮಾಹಿತಿ ನೀಡಿದ್ದಾರೆ.

ಅಂತರರಾಷ್ಟ್ರೀಯ ಕಡಲ ಗಡಿ ರೇಖೆಯನ್ನು (ಐಎಂಬಿಎಲ್)(IMBL) ದಾಟಿದ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅಂತರರಾಷ್ಟ್ರೀಯ ಗಡಿಗಳನ್ನು ದಾಟಿದ ಆರೋಪದ ಮೇಲೆ ಮೀನುಗಾರರು ಬಳಸಿದ ಇದೇ ದೋಣಿಯನ್ನು ಈ ಹಿಂದೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ವಶಪಡಿಸಿಕೊಳ್ಳಲಾಗಿತ್ತು.  ಘಟನೆಯ ಬಗ್ಗೆ ತಮಿಳುನಾಡು ಮೀನುಗಾರಿಕೆ ಇಲಾಖೆ ಭಾರತ ಸರ್ಕಾರದ(India Government) ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದೆ.

 ತಮಿಳುನಾಡಿನ ರಾಮೇಶ್ವರಂ(Rameshwaram) ಮತ್ತು ತಂಗಚಿಮಡಂನ(Tangachimadam) ಎಂಟು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ(Shrilanka Naval) ಜನವರಿ 12 ರಂದು ಮುಂಜಾನೆ ಬಂಧಿಸಿದೆ. ಈ ಸಂದರ್ಭದಲ್ಲಿ ಎರಡು ಯಾಂತ್ರೀಕೃತ ದೋಣಿಗಳನ್ನು ಶ್ರೀಲಂಕಾ ನೌಕಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಶ್ರೀಲಂಕಾ ನೌಕಾಪಡೆಯ ಪ್ರಕಾರ, ಭಾನುವಾರ ಮುಂಜಾನೆ ಐಎಂಬಿಎಲ್ ದಾಟಿ ನೆಡುಂಥೀವು ದ್ವೀಪದ ಬಳಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಲಾಗಿದೆ.

ಶನಿವಾರ ಬೆಳಗ್ಗೆ ರಾಮೇಶ್ವರಂ ಜೆಟ್ಟಿಯಿಂದ 169 ಯಾಂತ್ರೀಕೃತ ದೋಣಿಗಳಿಗೆ ಟೋಕನ್ ನೀಡಲಾಗಿದೆ. ಈ ದೋಣಿಗಳು ಭಾನುವಾರ ಸಂಜೆ ದಡಕ್ಕೆ ಮರಳಬೇಕಿತ್ತು
ಬಂಧಿಸಲಾದ ಮೀನುಗಾರರನ್ನು ಶ್ರೀಲಂಕಾದ ನೌಕಾ ಬಂದರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ವಶಪಡಿಸಿಕೊಂಡ ಯಾಂತ್ರೀಕೃತ ದೋಣಿಗಳನ್ನು ಕೂಡ ಬಂದರಿಗೆ ಒಯ್ಯಲಾಗಿದೆ. ವಶಪಡಿಸಿಕೊಂಡ ಎರಡು ದೋಣಿಗಳು ರಾಮೇಶ್ವರಂನ ಮುಖೇಶ್ ಕುಮಾರ್ ಮತ್ತು ತಂಗಚಿಮಡಂನ ಮರಿಯಾ ರೆಟ್ರಿಸನ್ ಅವರಿಗೆ ಸೇರಿದ್ದಾಗಿವೆ.
ಮಧ್ಯರಾತ್ರಿ ವೇಳೆ ಮೀನುಗಾರರನ್ನು ಬಂಧಿಸಿರುವುದನ್ನು ತಮಿಳುನಾಡು ಕರಾವಳಿಯ ಮೀನುಗಾರರ ಸಂಘಗಳ ಮುಖಂಡರು ಖಂಡಿಸಿದ್ದಾರೆ. ಇಂಥ ಘಟನೆಗಳ ಬಗ್ಗೆ ಮೀನುಗಾರರ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಪದೇ ಪದೆ ದೂರು ಸಲ್ಲಿಸಿದರೂ ಸಹ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ರಾಮೇಶ್ವರಂನ ಮೀನುಗಾರರು  ತಿಳಿಸಿದ್ದಾರೆ.

ಇದನ್ನು ಓದಿ : ಹಸುವಿನ ಮೇಲೆ ವಿಕೃತಿ ಮೆರೆದ ಮತಾಂಧನ ಬಂಧನ.

ಬೈಕ್ ಅಪಘಾತಪಡಿಸಿದ್ದಲ್ಲದೆ, ಮಾರಕ ಹಲ್ಲೆ. ಕಾರವಾರದಲ್ಲಿ ಹೆಚ್ಚಾಯ್ತು ನೌಕಾ ಸೈನಿಕರ ದೌರ್ಜನ್ಯ.

ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸಿ ತಿದ್ದಿಕೊಳ್ಳುತ್ತೇನೆ. ರಾಜಕೀಯ ಕಾರಣಕ್ಕೆ ಸುಳ್ಳೇ  ಟೀಕಿಸಿದರೆ ಐ ಡೋಂಟ್ ಕೇರ್: ಸಿ.ಎಂ ಖಡಕ್ ಮಾತು

ಗ್ರಾಸಿಮ್ ಇಂಡಸ್ಟ್ರೀ ಸೋರಿಕೆ ಪ್ರಕರಣ. ಮುನ್ನೆಚ್ಚರಿಕೆಯಾಗಿ ನಿಷೇದಾಜ್ಞೆ ಜಾರಿ.