ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ರಾಜ್ಯದ ಮೀನುಗಾರ ಸಮುದಾಯದ ಅಸಮಧಾನ ತಣಿಸಲು ಕಾಂಗ್ರೆಸ್(Congress) ಹೈಕಮಾಂಡ್ ಮುಂದಾಗಿದೆ. ಮಾಜಿ ಸಚಿವ ಮಂಕಾಳ ವೈದ್ಯ(Former Minister Mankal Vaidya) ಅವರಿಗೆ ವಿಧಾಸಭೆಯ ಉಪ ಸಭಾಪತಿಯಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್(CM D K Shivakumar) ಅವರೇ ಮಂಕಾಳ ಅವರಿಗೆ ಪೋನ್ ಮಾಡಿ ತಿಳಿಸಿದ್ದಾರೆ
ಈ ಹಿಂದೆ ವಿಧಾನಸಭೆ ಉಪ ಸಭಾಪತಿ(Deputy Speaker) ಸ್ಥಾನಕ್ಕೆ ಆಯ್ಕೆಯಾಗಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎನ್ ಪೊನ್ನಣ್ಣ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ(CM Political Secretary) ನೇಮಕ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former CM Siddaramaiha) ಅವರ ಸರ್ಕಾರದಲ್ಲಿ ಭಟ್ಕಳ ಶಾಸಕ ಮಂಕಾಳ ವೈದ್ಯ(Bhatkal MLA Mankal Vaidya) ಸಚಿವರಾಗಿದ್ದರು. ಪೊನ್ನಣ್ಷ ಅವರು ಸಿಎಂ ಕಾನೂನು ಸಲಹೆಗಾರರಾಗಿದ್ದರು. ಸಚಿವ ಸಂಪುಟ ವಿಸ್ತರಣೆ ಬಳಿಕ ಇಬ್ಬರು ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದರು.
ಆದರೆ ಇತ್ತೀಚಿಗೆ ಸಂಪುಟ ವಿಸ್ತರಣೆಯಲ್ಲಿ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ, ಅವರನ್ನು ಉಪ ಸಭಾಪತಿಯಾಗಿ ನೇಮಕ ಮಾಡಲಾಗಿತ್ತು. ಹೈಕಮಾಂಡ್ ಕಳುಹಿಸಿದ ಪಟ್ಟಿಯಲ್ಲಿ ಅವರನ್ನು ಉಪಾಸಭಾಧ್ಯಕ್ಷರನ್ನಾಗಿ ನೇಮಿಸಲು ಆದೇಶಿಸಲಾಗಿತ್ತು. ಆದರೆ ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಅವರನ್ನು ನೇಮಿಸಲಾಗಿದೆ.
ಮಾಜಿ ಸಚಿವ ಮಂಕಾಳ ವೈದ್ಯ(Former Minister Mankal Vaidya) ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ಒತ್ತಾಯಗಳು ಕೇಳಿ ಬಂದಿದ್ದವು. ಆದರೆ ಹೈಕಮಾಂಡ್ ಕೊನೆಯದಾಗಿ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ವೈದ್ಯ ಅವರನ್ನು ನೇಮಿಸಿದೆ. ಆದರೆ ಮಂಕಾಳ ವೈದ್ಯ ಅವರು ಒಪ್ಪುವ ಬಗ್ಗೆ ನಿರ್ಧರಿಸಿಲ್ಲ ಎನ್ನಲಾಗಿದೆ. ಒಂದು ವೇಳೆ ಒಪ್ಪಿದರೇ ಪಕ್ಷ ಸಂಘಟನೆಯ ಪ್ರಶ್ನೆ ಕಾರ್ಯಕರ್ತರನ್ನ ಕಾಡುತ್ತಿದೆ.
