​ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕುಂದಾಪುರ(Kundapur): ಇಲ್ಲಿನ ಎಂ. ಕೋಡಿ ಕಡಲತೀರದಲ್ಲಿ(Beach) ಅಪರೂಪದ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಭಾರಿ ಪ್ರಮಾಣದ ಬೂತಾಯಿ (ಬೈಗೆ) ಮೀನುಗಳ ರಾಶಿ ಸಮುದ್ರದ ಅಲೆಗಳೊಂದಿಗೆ ದಡಕ್ಕೆ ಕೊಚ್ಚಿಕೊಂಡು ಬಂದ ಘಟನೆ ನಡೆದಿದೆ.

​ಸಮುದ್ರದ ದಂಡೆಯುದ್ದಕ್ಕೂ ಬೃಹತ್ ಪ್ರಮಾಣದಲ್ಲಿ ಮೀನುಗಳು ಕಂಡುಬರುತ್ತಿದ್ದಂತೆ ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ಕಡಲತೀರಕ್ಕೆ ದಾವಿಸಿದ್ದಾರೆ.

​ಕೈಚೀಲ, ಬಕೆಟ್ ಹಾಗೂ ಲಭ್ಯವಿದ್ದ ವಿವಿಧ ಪರಿಕರಗಳನ್ನು ಹಿಡಿದುಕೊಂಡು ಬಂದ ಜನರು ಮೀನುಗಳನ್ನು ಸಂಗ್ರಹಿಸಲು ಮುಗಿಬಿದ್ದರು. ಕೆಲವೇ ಹೊತ್ತಿನಲ್ಲಿ ಇಡೀ ಎಂ. ಕೋಡಿ ಕಡಲತೀರದಲ್ಲಿ ಭಾರಿ ಜನಸಂದಣಿ ಏರ್ಪಟ್ಟಿತ್ತು.

​ಸಾಮಾನ್ಯವಾಗಿ ಆಳ ಸಮುದ್ರದಲ್ಲಿ(Deapsea) ಸಿಗುವ ಬೂತಾಯಿ ಮೀನುಗಳು ಈ ರೀತಿ ಭಾರಿ ಸಂಖ್ಯೆಯಲ್ಲಿ ದಡಕ್ಕೆ ಬಂದಿರುವುದು ಕರಾವಳಿ (Coastal) ಭಾಗದಲ್ಲಿ ಅಪರೂಪದ ದೃಶ್ಯವಾಗಿದ್ದು, ಸ್ಥಳೀಯರ ಗಮನ ಸೆಳೆದಿದೆ. ವರ್ಷದ ಹಿಂದೆ ಇದೇ ರೀತಿಯಾಗಿ ಬೈಗೆ ಮೀನಿನ ರಾಶಿ ಉಡುಪಿ(Udupi) ಮತ್ತು ಉತ್ತರಕನ್ನಡ (Uttarkannada) ಜಿಲ್ಲೆಯ ಕಡಲತೀರಗಳಲ್ಲಿ ಬಂದು ಬಿದ್ದಿದ್ದವು.